ದನಗಳ ಉತ್ಪಾದನೆ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯವು ಅವುಗಳ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಅಂತೆಯೇ ದನಗಳ ಗರಿಷ್ಠ ಉತ್ಪಾದನೆಯು ನಿರ್ಧಿಷ್ಟ ವರ್ಷ ವಯಸ್ಸಿನ ಅವಧಿಯಲ್ಲಿ ಕಂಡುಬರುತ್ತದೆ. ಹಸು ಮತ್ತು ಎಮ್ಮೆಗಳು ೫ ರಿಂದ ೧೦ ನೆಯ ವರ್ಷದ ವಯಸ್ಸಿನಲ್ಲಿ ಅತೀ ಹೆಚ್ಚು ಹಾಲನ್ನು ಕೊಡಬಲ್ಲವು. ಜಾನುವಾರುಗಳ ವಯಸ್ಸನ್ನು ಗುರುತಿಸುವುದರಿಂದ ಉತ್ತಮ ದನಗಳ ಆಯ್ಕೆ ಮಾಡಿ, ಕೊಂಡುಕೊಳ್ಳಲು, ದನಗಳ ಹಾಲಿನ ಸಾಮರ್ಥ್ಯ ತಿಳಿಯಲು ಮತ್ತು ಪಶುಗಳ ಬೆಲೆ (ಕಿಮ್ಮತ್ತು) ನಿರ್ಧರಿಸುವುದಕ್ಕೆ ಉಪಯುಕ್ತವಾಗುತ್ತದೆ.

ದನಗಳ ವಯಸ್ಸು ಕಂಡು ಹಿಡಿಯಲು ಬಳಸುವ ವಿವಿಧ ಪದ್ಧತಿಗಳು

. ಹುಟ್ಟಿದ ತಾರೀಖಿನ ದಾಖಲಾತಿಯಿಂದ

ವಯಸ್ಸು ಕಂಡುಹಿಡಿಯುವಲ್ಲಿ ಇದೊಂದು ಅತ್ಯುತ್ತಮ ಪದ್ಧತಿ. ಒಂದು ದನಕ್ಕೆ ಸಂಬಂಧಪಟ್ಟ ಎಲ್ಲವನ್ನೂ ಕಾಲಾವಧಿಯ ಆಧಾರದ ಮೇಲೆ ನಮೂದಿಸಲಾಗುತ್ತದೆ. ನಮೂದಿಸಿದ ಪುಸ್ತಕವನ್ನು 'ವಂಶಾವಳಿಯ ನಕ್ಷೆ' ಎಂದು ಕರೆಯುತ್ತಾರೆ. ಆದಾಗ್ಯೂ ರೈತರು ಕರು ಹುಟ್ಟಿದ ದಿನಾಂಕ ಬರೆದಿಡದಿದ್ದರೆ ವಯಸ್ಸು ನಿರ್ಣಯಿಸುವುದು ಕಷ್ಟವಾಗುತ್ತದೆ.

೨. ದನಗಳ ದೇಹದ ವೀಕ್ಷಣೆ

ಸಾಮಾನ್ಯ ದೇಹದ ವೀಕ್ಷಣೆಯಿಂದ ದನಗಳ ಅಂದಾಜು ವಯಸ್ಸನ್ನು ನಿರ್ಧರಿಸಬಹುದು.

೩. ಗೊರಸು ನೋಡಿ ವಯಸ್ಸು ನಿರ್ಧರಿಸುವುದು

ಎಳೆಯ ದನಗಳ ಗೊರಸುಗಳು ಸಣ್ಣದಾಗಿದ್ದು, ಮೃದು ಮತ್ತು ತಳ ಸಮಾನವಾಗಿರುತ್ತದೆ. ವಯಸ್ಸಾದ ದನಗಳ ಗೊರಸುಗಳು ದೊಡ್ಡದಾಗಿದ್ದು, ತಳ ಬಿರುಸಾಗಿದ್ದು, ಸಮನಾಗಿರುವುದಿಲ್ಲ.

೪. ಕೊಂಬುಗಳಿಂದ

ದನಗಳ ವಯಸ್ಸು ಹೆಚ್ಚಾದಂತೆ ಕೊಂಬುಗಳು ಬೆಳೆದು ಕೊಂಬುಗಳ ಉಂಗರುಗಳು ಕಾಣಿಸಿಕೊಳ್ಳುತ್ತವೆ. ಮೊದಲ ಉಂಗುರ, ನಮ್ಮ ದೇಶಿ ದನಗಳಲ್ಲಿ ಮೂರು ವರ್ಷಕ್ಕೆ ಕಾಣುತ್ತದೆ. ಆನಂತರ ಪ್ರತಿ ವರ್ಷಕ್ಕೊಂದು ಉಂಗರುಗಳು ಬೆಳೆಯುತ್ತವೆ.


೫. ಹಲ್ಲುಗಳ ಆಧಾರದ ಮೇಲೆ

ವಿವಿಧ ರೀತಿಯ ಹಲ್ಲುಗಳನ್ನು ಅವುಗಳ ಆಕಾರ ಮತ್ತು ಸ್ಥಳಗಳ ಆಧಾರದ ಮೇಲೆ ನಾಲ್ಕು ರೀತಿಯಾಗಿ ವಿಂಗಡಿಸಬಹುದು.

i. ಬಾಚಿ ಹಲ್ಲು (ಬಾ.ಹ): ದನಗಳಲ್ಲಿ ಒಟ್ಟು ೪ ಜೊತೆ ಬಾಚಿ ಹಲ್ಲುಗಳು ಕೆ

ದವಡೆಯಲ್ಲಿರುತ್ತವೆ. ಇವು ಬಾಯಿಯ ಮುಂದೆ ಕಂಡು ಬರುತ್ತವೆ. ದನದ ಮೇಲಿನ ದವಡೆಯಲ್ಲಿ ಬಾಚಿ ಹಲ್ಲುಗಳು ಇರುವುದಿಲ್ಲ. ಇದರ ಬದಲಾಗಿ ಗಟ್ಟಿಯಾದ ವಸಡು ಇರುತ್ತದೆ.

ii. ಕೋರೆ (ಊಳಿ) ಹಲ್ಲು (ಕೋ.ಹ) : ದನಗಳಲ್ಲಿ ಕೋರೆ ಹಲ್ಲುಗಳು ಇರುವುದಿಲ್ಲ.

ಮಾಂಸಾಹಾರಿ ಪ್ರಾಣಿಗಳಲ್ಲಿ ಇವು ಬಾಚಿ ಹಲ್ಲುಗಳ ಹಿಂದೆ ಕಂಡು ಬರುತ್ತವೆ.

iii ಮುಂದಿನ ದವಡೆ ಹಲ್ಲು (ಮುಂ.ದ.ಹ): ದನಗಳಲ್ಲಿ ಒಟ್ಟು ೬ ಜೊತೆ ಮುಂದಿನ

ದವಡೆ ಹಲ್ಲುಗಳು ಇರುತ್ತವೆ. ಮೇಲೆ ೩ ಜೊತೆ ಮತ್ತು ಕೆಳಗಿನ ದವಡೆಯಲ್ಲಿ ೩ ಜೊತೆ ಇರುತ್ತದೆ.

iv.ಹಿಂದಿನ ದವಡೆ ಹಲ್ಲು (ಹಿಂ.ದ.ಹ): ದನಗಳಲ್ಲಿ ಒಟ್ಟು ೬ ಜೊತೆ ಹಿಂದಿನ ದವಡೆ ಹಲ್ಲುಗಳು ಇರುತ್ತವೆ. ಮೇಲೆ ೩ ಜೊತೆ ಮತ್ತು ಕೆಳಗಿನ ದವಡೆಯಲ್ಲಿ ೩ ಜೊತೆ ಇರುತ್ತದೆ.

ಮನುಷ್ಯರಲ್ಲಿ ಇದ್ದ ಹಾಗೆ ಜಾನುವಾರುಗಳಲ್ಲಿ (ಆಕಳು, ಎಮ್ಮೆ, ಎತ್ತು, ಕುರಿ ಮತ್ತು ಆಡು) ಕೂಡಾ ತಾತ್ಕಾಲಿಕ (ಹಾಲು ಹಲ್ಲು) ಮತ್ತು ಶಾಶ್ವತ ಹಲ್ಲುಗಳು ಕಂಡು ಬರುತ್ತವೆ.

ಅ. ತಾತ್ಕಾಲಿಕ ಹಲ್ಲುಗಳು

ಗಾತ್ರದಲ್ಲಿ ಸಣ್ಣಗಿದ್ದು ಬೆಳ್ಳಗಿರುತ್ತವೆ. ಇವುಗಳ ದಂತ ಸೂತ್ರ ಹೀಗಿರುತ್ತದೆ. ೨ (ಬಾ.ಹ. ೦/೪, ಕೋ.ಹ. O/O, ಮುಂ.ದ.ಹ.೩/೩) ಒಟ್ಟು ಹಲ್ಲುಗಳು=೨೦

ಆ. ಶಾಶ್ವತ ಹಲ್ಲುಗಳು

ಗಾತ್ರದಲ್ಲಿ ದೊಡ್ಡದಾಗಿದ್ದು ಸ್ವಲ್ಪ ಹಳದಿಯಿರುತ್ತವೆ. ಇವುಗಳ ದಂತ ಸೂತ್ರ ಹೀಗಿರುತ್ತದೆ. ೨ (ಬಾ.ಹ. ೦/೪, ಕೋ.ಹ. O/O, ಮುಂ.ದ.ಹ. ೩/೩, ಹಿಂ.ದ.ಹ ೩/೩), ಒಟ್ಟು ಹಲ್ಲುಗಳು = ೩೨.


ಈ ಕೆಳಗಿನ ಕೋಷ್ಟಕವನ್ನು ಉಪಯೋಗಿಸಿಕೊಂಡು ಎತ್ತು, ಹಸು, ಎಮ್ಮೆಗಳ ವಯಸ್ಸನ್ನು ಹಲ್ಲುಗಳ ಆಧಾರದ ಮೇಲೆ ಕಂಡು ಹಿಡಿಯುವುದು ಸುಲಭ ವಿಧಾನವಾಗಿದೆ.

ಬಾಚಿ ಹಲ್ಲುಗಳ ಸ್ಥಾನ ತಾತ್ಕಾಲಿಕ ಹಲ್ಲುಗಳು ಶಾಶ್ವತ ಹಲ್ಲುಗಳು
ಹುಟ್ಟುವ ವಯಸ್ಸು
ಹುಟ್ಟುವ ವಯಸ್ಸು ಬೀಳುವ ವಯಸ್ಸು
ಮೊದಲನೆ (ಮಧ್ಯದ) ಜೊತೆ ಜಾನುವಾರು ಹುಟ್ಟಿದಾಗ ಇರುತ್ತವೆ. ೧೦ನೆಯ ತಿಂಗಳು ೧/½ ಯಿಂದ ೨ ವರ್ಷ
ಎರಡನೆ ಜೊತೆ ೨ನೆಯ ವಾರ ೧೫ನೆಯ ತಿಂಗಳು ೨½ ಯಿಂದ ೩ ವರ್ಷ
ಮೂರನೆ ಜೊತೆ ೩ನೆಯ ವಾರ ೧೮ನೆಯ ತಿಂಗಳು ೩½ ಯಿಂದ ೪ ವರ್ಷ
ನಾಲ್ಕನೆ (ಕೊನೆಯ) ಜೊತೆ ೪ ನೆಯ ವಾರ ೨೧ನೆಯ ತಿಂಗಳು ೪½ ಯಿಂದ ೫ ವರ್ಷ

ಮಿಶ್ರತಳಿ ಜಾನುವಾರುಗಳಲ್ಲಿ ಮೇಲೆ ಹೇಳಿದ ಹಲ್ಲುಗಳು ಜವಾರಿ ತಳಿಗಳಿಗಿಂತ ಸ್ವಲ್ಪ ಸಮಯ ಮೊದಲೇ ಕಾಣಿಸಿಕೊಳ್ಳಬಹುದು.


Reference  - Package of Practices, UAS Dharwad