ಈ ತಳಿಯ ಇನ್ನಿತರ ಹೆಸರುಗಳೆಂದರೆ ಥಾರಿ, ಬೂದು ಸಿಂಧಿ, ಬಿಳಿ ಸಿಂಧಿ. ಥಾರ ಮರುಭೂಮಿಯ ಈ ದನಗಳು ಸಿಂದ್ ಪ್ರಾಂತ್ಯ, ಪಂಜಾಬ್ ಹಾಗೂ ರಾಜಸ್ತಾನದ ಭಾಗಗಳಲ್ಲಿ ಕಾಣಸಿಗುತ್ತವೆ. ಪಶ್ಚಿಮ ಭಾರತದ ಕಚ್ಚ, ಮಾರವಾಡಗಳಲ್ಲೂ ಈ ದನಗಳಿವೆ. ಮಧ್ಯಮ ಮೈಗಟ್ಟು, ಗಿಡ್ಡ ದೇಹ ಹಾಗೂ ಸರಳ ಉದ್ದ ಕಾಲುಗಳನ್ನು ಹೊಂದಿದ್ದು, ಅಗಲ ಹಣೆ ಮಧ್ಯಮ ಕೋಡು ಇರುತ್ತವೆ. ಗಂಗೆದೊಗಲು ಮಧ್ಯಮ ಗಾತ್ರದ್ದಿದ್ದು ಉದ್ದ ಬಾಲಕ್ಕೆ ಕಪ್ಪು ಕೂದಲಿರುತ್ತವೆ. ಮಧ್ಯಮ ಗಾತ್ರದ ಕೆಚ್ಚಲಿರುತ್ತದೆ. ಆಕಳುಗಳು ಒಂದು ಸೂಲಿನಲ್ಲಿ ೧೫೦೦ ಕಿ. ಗ್ರಾಂ ಹಾಲು ಕೊಟ್ಟರೆ ಎತ್ತುಗಳು ಚಕ್ಕಡಿ ಎಳೆಯಲು ಹಾಗೂ ಉಳುಮೆಗೆ ಯೋಗ್ಯವಾಗಿವೆ.
Reference - Package of Practices, UAS Dharwad
0 Comments