Ad Code

ವಾಕ್ಯಗಳು




  • ವಾಕ್ಯ ಎಂದರೆ - ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದಸಮೂಹ.
  • ವಾಕ್ಯರಚನೆ ಎಂದರೆ - ಅನೇಕ ವಾಕ್ಯಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದು.
  • ಅನ್ವಯಾನುಕ್ರಮ ಎಂದರೆ - ಮೊದಲು ಕರ್ತೃಪದ, ಆಮೇಲೆ ಕರ್ಮಪದ, ಅನಂತರ ಕ್ರಿಯಾಪದ ಬರುವಂತೆ ಜೋಡಿಸುವಿಕೆ.
  • ಅಧ್ಯಾಹಾರ ಎಂದರೆ - ಕರ್ತೃ, ಕರ್ಮ, ಕ್ರಿಯಾಪದಗಳು ಒಮ್ಮೊಮ್ಮೆ ವಾಕ್ಯಗಳಲ್ಲಿ ಬಿಟ್ಟುಹೋಗಿದ್ದರೆ, ಇರುವ ಪದಗಳ ಅರ್ಥ ಸಹಾಯದಿಂದ ಇರಬೇಕಾದ ಪದಗಳನ್ನು ಊಹಿಸಿ ಸೇರಿಸುವುದು.
  • ರೂಪನಿಷ್ಪತ್ತಿ ಎಂದರೆ - ವಾಕ್ಯದಲ್ಲಿ ಬರುವ ಪ್ರತಿಯೊಂದು ಪದವನ್ನು ಅದು ವ್ಯಾಕರಣದ ದೃಷ್ಟಿಯಿಂದ ಹೇಗೆ ರೂಪಸಿದ್ಧಿಯನ್ನು ಪಡೆಯಿತು ಎಂಬುದನ್ನು ಹೇಳುವುದು.
  • ವಾಕ್ಯಗಳಲ್ಲಿರುವ ಮೂರು ಪ್ರಕಾರಗಳು - ಸಾಮಾನ್ಯ ವಾಕ್ಯ, ಸಂಯೋಜಿತ ವಾಕ್ಯ ಮತ್ತು ಮಿಶ್ರವಾಕ್ಯ.
  • ಸಾಮಾನ್ಯ ವಾಕ್ಯ ಎಂದರೆ - ಒಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳು.
  • ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು - ಸಂಯೋಜಿತ ವಾಕ್ಯ.
  • ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂತಹ ವಾಕ್ಯವನ್ನು ಹೀಗೆನ್ನುವರು - ಮಿಶ್ರವಾಕ್ಯ.
  • ವಾಕ್ಯ ವಿಭಜನೆ ಎಂದರೆ - ಕರ್ತೃ, ಕರ್ಮ, ಕ್ರಿಯಾಪದ ಇತ್ಯಾದಿ ಪ್ರಧಾನ ಪದಗಳಿಗೆ ಇರುವ ಕರ್ತೃ ವಿಶೇಷಣಗಳು, ಕರ್ಮವಿಶೇಷಣಗಳು, ಕ್ರಿಯಾವಿಶೇಷಣಗಳು ಮುಂತಾದವುಗಳನ್ನು ಅವುಗಳ ಸಂಬಂಧವನ್ನು ಬೇರ್ಪಡಿಸಿ ಹೇಳುವ ವಿಧಾನ.


Post a Comment

0 Comments

Close Menu