Ad Code

ಸಮಾಸ ಪ್ರಕರಣ



  • ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾದರೆ ಅದು - ಸಮಾಸ.
  • ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ ಹೀಗೆನ್ನುವರು - ವಿಗ್ರಹ ವಾಕ್ಯ.
  • ಸಮಾಸಗಳಲ್ಲಿರುವ ವಿಧಗಳ ಸಂಖ್ಯೆ - ಎಂಟು.
  • ಸಮಾಸಗಳಲ್ಲಿರುವ ಎಂಟು ವಿಧಗಳು - ತತ್ಪುರುಷ ಸಮಾಸ, ಕರ್ಮಧಾರಯ ಸಮಾಸ, ದ್ವಿಗು ಸಮಾಸ, ಅಂಶಿ ಸಮಾಸ, ದ್ವಂದ್ವ ಸಮಾಸ, ಬಹುವ್ರೀಹಿ ಸಮಾಸ, ಕ್ರಿಯಾ ಸಮಾಸ ಮತ್ತು ಗಮಕ ಸಮಾಸ.
  • ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸವೇ - ತತ್ಪುರುಷ ಸಮಾಸ.
  • 'ಮರಗಾಲು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ತತ್ಪುರುಷ ಸಮಾಸ.
  • 'ಮರಗಾಲು' ಪದದ ವಿಗ್ರಹ ವಾಕ್ಯ - ಮರದ + ಕಾಲು.
  • 'ಹಗಲುಗನಸು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ತತ್ಪುರುಷ ಸಮಾಸ.
  • 'ಹಗಲುಗನಸು' ಪದದ ವಿಗ್ರಹ ವಾಕ್ಯ - ಹಗಲಿನಲ್ಲಿ + ಕನಸು.
  • 'ತೇರುಮರ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ತತ್ಪುರುಷ ಸಮಾಸ.
  • 'ತೇರುಮರ' ಪದದ ವಿಗ್ರಹ ವಾಕ್ಯ - ತೇರಿಗೆ + ಮರ.
  • 'ಕಣ್ಣುಕುರುಡ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ತತ್ಪುರುಷ ಸಮಾಸ.
  • 'ಕಣ್ಣುಕುರುಡ' ಪದದ ವಿಗ್ರಹ ವಾಕ್ಯ - ಕಣ್ಣಿನಿಂದ + ಕುರುಡ.
  • 'ವ್ಯಾಘ್ರಭಯ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ತತ್ಪುರುಷ ಸಮಾಸ.
  • 'ವ್ಯಾಘ್ರಭಯ' ಪದದ ವಿಗ್ರಹ ವಾಕ್ಯ - ವ್ಯಾಘ್ರದನೆಯಿಂದ + ಭಯ.
  • ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವೇ - ಕರ್ಮಧಾರಯ ಸಮಾಸ.
  • 'ಹಣ್ಣೇನು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕರ್ಮಧಾರಯ ಸಮಾಸ.
  • 'ಹಣ್ಣೇನು' ಈ ಸಮಾಸದ ವಿಗ್ರಹ ವಾಕ್ಯ ಇದು - ಹಿರಿದು + ಜೇನು.
  • 'ಶ್ವೇತವಸ್ತ್ರ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕರ್ಮಧಾರಯ ಸಮಾಸ.
  • 'ಶ್ವೇತವಸ್ತ್ರ' ಈ ಸಮಾಸದ ವಿಗ್ರಹ ವಾಕ್ಯ ಇದು - ಶ್ವೇತವಾದ + ವಸ್ತ್ರ.
  • 'ಪುಂಡರೀಕಾಕ್ಷಗಳು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕರ್ಮಧಾರಯ ಸಮಾಸ.
  • 'ಪುಂಡರೀಕಾಕ್ಷಗಳು' ಈ ಸಮಾಸದ ವಿಗ್ರಹ ವಾಕ್ಯ ಇದು - ಪುಂಡರೀಕದಂತೆ + ಅಕ್ಷಗಳು.
  • 'ಮುಖಕಮಲ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕರ್ಮಧಾರಯ ಸಮಾಸ.
  • 'ಮುಖಕಮಲ' ಈ ಸಮಾಸದ ವಿಗ್ರಹ ವಾಕ್ಯ ಇದು - ಮುಖವು + ಕಮಲದಂತೆ.
  • 'ಫಲಾಹಾರ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕರ್ಮಧಾರಯ ಸಮಾಸ.
  • 'ಫಲಾಹಾರ' ಈ ಸಮಾಸದ ವಿಗ್ರಹ ವಾಕ್ಯ ಇದು - ಫಲವೇ + ಆಹಾರ.
  • 'ನಳರಾಜ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕರ್ಮಧಾರಯ ಸಮಾಸ.
  • 'ನಳರಾಜ' ಈ ಸಮಾಸದ ವಿಗ್ರಹ ವಾಕ್ಯ ಇದು - ನಳನೆಂಬ + ರಾಜ.
  • ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ - ದ್ವಿಗು ಸಮಾಸ.
  • 'ಒಗ್ಗಟ್ಟು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ದ್ವಿಗು ಸಮಾಸ.
  • 'ಒಗ್ಗಟ್ಟು' ಈ ಸಮಾಸದ ವಿಗ್ರಹ ವಾಕ್ಯ ಇದು - ಒಂದು + ಕಟ್ಟು.
  • 'ನಾಲ್ಮಡಿ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ದ್ವಿಗು ಸಮಾಸ.
  • 'ನಾಲ್ಮಡಿ' ಈ ಸಮಾಸದ ವಿಗ್ರಹ ವಾಕ್ಯ ಇದು - ನಾಲ್ಕು + ಮಡಿ.
  • 'ಪಂಚೇಂದ್ರಿಯಗಳು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ದ್ವಿಗು ಸಮಾಸ.
  • 'ಪಂಚೇಂದ್ರಿಯಗಳು' ಈ ಸಮಾಸದ ವಿಗ್ರಹ ವಾಕ್ಯ ಇದು - ಪಂಚಗಳಾದ + ಇಂದ್ರಿಯಗಳು.
  • ಈ ಸಮಾಸವನ್ನು 'ಅವ್ಯಯೀಭಾವ ಸಮಾಸ' ಎಂದೂ ಕರೆಯುತ್ತಾರೆ - ಅಂಶಿ ಸಮಾಸ.
  • ಪೂರ್ವೋತ್ತರಪದಗಳು ಅಂಶಾಂತಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸವೇ - ಅಂಶಿ ಸಮಾಸ.
  • 'ಮುಂಗೈ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಅಂಶಿ ಸಮಾಸ.
  • 'ಮುಂಗೈ' ಈ ಸಮಾಸದ ವಿಗ್ರಹ ವಾಕ್ಯ ಇದು - ಕೈಯ + ಮುಂದು.
  • 'ಕೆಳತುಟಿ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಅಂಶಿ ಸಮಾಸ.
  • 'ಕೆಳತುಟಿ' ಈ ಸಮಾಸದ ವಿಗ್ರಹ ವಾಕ್ಯ ಇದು - ತುಟಿಯ + ಕೆಳಗೆ.
  • ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಹೀಗೆಂದು ಹೆಸರು - ದ್ವಂದ್ವ ಸಮಾಸ.
  • 'ಕೆರೆಕಟ್ಟೆಬಾವಿ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ದ್ವಂದ್ವ ಸಮಾಸ.
  • 'ಕೆರೆಕಟ್ಟೆಬಾವಿ' ಈ ಸಮಾಸದ ವಿಗ್ರಹ ವಾಕ್ಯ ಇದು - ಕೆರೆಯೂ + ಕಟ್ಟೆಯೂ + ಬಾವಿಯೂ.
  • ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಹೀಗೆನ್ನುವರು - ಬಹುವ್ರೀಹಿ ಸಮಾಸ.
  • 'ಮುಕ್ಕಣ್ಣ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಬಹುವ್ರೀಹಿ ಸಮಾಸ.
  • 'ಮುಕ್ಕಣ್ಣ' ಈ ಸಮಾಸದ ವಿಗ್ರಹ ವಾಕ್ಯ ಇದು - ಮೂರು ಕಣ್ಣು ಉಳ್ಳವ.
  • 'ಇಕ್ಷುಕೋದಂಡ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಬಹುವ್ರೀಹಿ ಸಮಾಸ.
  • 'ಇಕ್ಷುಕೋದಂಡ' ಈ ಸಮಾಸದ ವಿಗ್ರಹ ವಾಕ್ಯ ಇದು - ಇಕ್ಷುವನ್ನು ಕೋದಂಡವಾಗಿ ಉಳ್ಳವನು.
  • 'ಹೋಲಾಹೋಲಿ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಬಹುವ್ರೀಹಿ ಸಮಾಸ.
  • 'ಹೋಲಾಹೋಲಿ' ಈ ಸಮಾಸದ ವಿಗ್ರಹ ವಾಕ್ಯ ಇದು - ಕೋಲಿನಿಂದ ಕೋಲಿನಿಂದ ಮಾಡಿದ ಜಗಳ.
  • ಪೂರ್ವಪದವು ಪ್ರಾಯಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಹೀಗೆನ್ನುವರು - ಕ್ರಿಯಾ ಸಮಾಸ.
  • 'ಮೈದಡವಿ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕ್ರಿಯಾ ಸಮಾಸ.
  • 'ಮೈದಡವಿ' ಈ ಸಮಾಸದ ವಿಗ್ರಹ ವಾಕ್ಯ ಇದು - ಮೈಯನ್ನು + ತಡವಿ.
  • 'ದಾರಿಕಾಣನು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕ್ರಿಯಾ ಸಮಾಸ.
  • 'ದಾರಿಕಾಣನು' ಈ ಸಮಾಸದ ವಿಗ್ರಹ ವಾಕ್ಯ ಇದು - ದಾರಿಯನ್ನು + ಕಾಣನು.
  • 'ನೀರೊಡಿ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಕ್ರಿಯಾ ಸಮಾಸ.
  • 'ನೀರೊಡಿ' ಈ ಸಮಾಸದ ವಿಗ್ರಹ ವಾಕ್ಯ ಇದು - ನೀರಿನಿಂದ + ಕೂಡಿ.
  • ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಹೀಗೆಂದು ಕರೆಯುವರು - ಗಮಕ ಸಮಾಸ.
  • 'ಆ ಹುಡುಗ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಗಮಕ ಸಮಾಸ.
  • 'ಆ ಹುಡುಗ' ಈ ಸಮಾಸದ ವಿಗ್ರಹ ವಾಕ್ಯ ಇದು - ಅವನು + ಹುಡುಗ.
  • 'ಮಾಡಿದಡುಗೆ' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ - ಗಮಕ ಸಮಾಸ.
  • 'ಮಾಡಿದಡುಗೆ' ಈ ಸಮಾಸದ ವಿಗ್ರಹ ವಾಕ್ಯ ಇದು - ಮಾಡಿದ್ದುದು + ಅಡುಗೆ.

Post a Comment

0 Comments

Close Menu