Ad Code

ಕ್ರಿಯಾಪದ ಪ್ರಕರಣ


  • ಕ್ರಿಯಾಪದ ಎಂದರೆ - ಕ್ರಿಯೆಯನ್ನು ಸೂಚಿಸುವ ಪದ.
  • ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಹೀಗೆನ್ನುವರು - ಕ್ರಿಯಾಪಕೃತಿ ಅಥವಾ ಧಾತು.
  • ಧಾತುವಿನ ಎರಡು ವಿಧಗಳು - ಮೂಲ ಧಾತು ಮತ್ತು ಸಾಧಿತ (ಪ್ರತ್ಯಯಾಂತ) ಧಾತು.
  • ಮೂಲಧಾತುಗಳಿಗೆ ಉದಾಹರಣೆಗಳು - ಮಲಗು, ಹೋಗು, ಬರು, ತಿನ್ನು ಇತ್ಯಾದಿ.
  • ಸಾಧಿತ ಅಥವಾ ಪ್ರತ್ಯಯಾಂತ ಧಾತುಗಳಿಗೆ ಉದಾಹರಣೆಗಳು - ಅಬ್ಬರಿಸು, ಕಣ್ಣುಡಿಸು, ಧಗಧಗಿಸು, ಯತ್ನಿಸು, ತಿನ್ನಿಸು ಇತ್ಯಾದಿ.
  • ಸಕರ್ಮಕ ಧಾತು ಎಂದರೆ - ಕರ್ಮಪದವನ್ನು ಅಪೇಕ್ಷಿಸುವ ಧಾತುಗಳು.
  • ಸಕರ್ಮಕ ಧಾತುಗಳಿಗೆ ಉದಾಹರಣೆಗಳು - ಮಾಡು, ಬಿಡು, ಮುಚ್ಚು, ಕತ್ತರಿಸು ಇತ್ಯಾದಿ.
  • ಅಕರ್ಮಕ ಧಾತು ಎಂದರೆ - ಕರ್ಮಪದದ ಅಪೇಕ್ಷೆಯಿಲ್ಲದ ಧಾತುಗಳು.
  • ಅಕರ್ಮಕ ಧಾತುಗಳಿಗೆ ಉದಾಹರಣೆಗಳು - ಮಲಗು, ಓಡು, ಬದುಕು, ಹುಟ್ಟು, ನಾಚು, ಬರು, ಇರು, ಏಳು ಇತ್ಯಾದಿ.
  • ಧಾತುಗಳಿಗೆ ಆಖ್ಯಾತ ಪ್ರತ್ಯಯ ಸೇರಿದರೆ ಅದು - ಕ್ರಿಯಾಪದ.
  • ಧಾತುಗಳಿಗೆ ವರ್ತಮಾನ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿದರೆ ಅದು - ವರ್ತಮಾನಕಾಲ ಕ್ರಿಯಾಪದ.
  • 'ಹೋಗುತ್ತಾನೆ' ಈ ಕ್ರಿಯಾಪದದಲ್ಲಿರುವ ಧಾತು - ಹೋಗು.
  • 'ಹೋಗುತ್ತಾನೆ' ಈ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ - ಉತ್ತ.
  • 'ಹೋಗುತ್ತಾನೆ' ಈ ಕ್ರಿಯಾಪದದಲ್ಲಿರುವ ಆಖ್ಯಾತ ಪ್ರತ್ಯಯ - ಆನೆ.
  • ಧಾತುಗಳಿಗೆ ಭೂತಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿದರೆ ಅದು - ಭೂತಕಾಲದ ಕ್ರಿಯಾಪದ.
  • 'ತಿಳಿದನು' ಈ ಕ್ರಿಯಾಪದದಲ್ಲಿರುವ ಧಾತು - ತಿಳಿ.
  • 'ತಿಳಿದನು' ಈ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ - ದ.
  • 'ತಿಳಿದನು' ಈ ಕ್ರಿಯಾಪದದಲ್ಲಿರುವ ಆಖ್ಯಾತ ಪ್ರತ್ಯಯ - ಅನು.
  • ಧಾತುಗಳಿಗೆ ಭವಿಷ್ಯತ್‌ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿದರೆ ಅದು - ಭವಿಷ್ಯತ್ ಕಾಲದ ಕ್ರಿಯಾಪದ.
  • 'ಕೊಡುವನು' ಈ ಕ್ರಿಯಾಪದದಲ್ಲಿರುವ ಧಾತು - ಕೊಡು.
  • 'ಕೊಡುವನು' ಈ ಕ್ರಿಯಾಪದದಲ್ಲಿರುವ ಕಾಲಸೂಚಕ ಪ್ರತ್ಯಯ - ವ.
  • 'ಕೊಡುವನು' ಈ ಕ್ರಿಯಾಪದದಲ್ಲಿರುವ ಆಖ್ಯಾತ ಪ್ರತ್ಯಯ - ಅನು.
  • ವಿಧ್ಯರ್ಥಕ ಕ್ರಿಯಾಪದ ಎಂದರೆ - ಆಶೀರ್ವಾದ, ಅಪ್ಪಣೆ, ಹಾರೈಕೆ, ಅಜ್ಞೆ ಇವುಗಳನ್ನು ತೋರುವಾಗ ಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಉಂಟಾಗುವ ಕ್ರಿಯಾಪದಗಳು.
  • ವಿಧ್ಯರ್ಥಕ ಕ್ರಿಯಾಪದಗಳಿಗೆ ಉದಾಹರಣೆಗಳು - ಮಾಡಲಿ, ಮಾಡಿರಿ, ಮಾಡೋಣ, ಮಾಡುವ, ಹೋಗಲಿ, ಆಗಲಿ, ಓದಲಿ ಇತ್ಯಾದಿ.
  • ನಿಷೇಧಾರ್ಥಕ ಕ್ರಿಯಾಪದ ಎಂದರೆ - ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಉಂಟಾಗುವ ಕ್ರಿಯಾಪದಗಳು.
  • ನಿಷೇಧಾರ್ಥಕ ಕ್ರಿಯಾಪದಗಳಿಗೆ ಉದಾಹರಣೆಗಳು - ತಿನ್ನನು, ಬಾರನು, ಹೋಗನು, ಓದನು, ಮಾಡನು ಇತ್ಯಾದಿ.
  • ಸಂಭಾವನಾರ್ಥಕ ಕ್ರಿಯಾಪದ ಎಂದರೆ - ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಉಂಟಾಗುವ ಕ್ರಿಯಾಪದಗಳು.
  • ಸಂಭಾವನಾರ್ಥಕ ಕ್ರಿಯಾಪದಗಳಿಗೆ ಉದಾಹರಣೆಗಳು - ಬಂದಾನು, ತಿಂದಾನು, ಏರೀತು, ಹೋದಾನು ಇತ್ಯಾದಿ.
  • ಕ್ರಿಯಾರ್ಥಕಾವ್ಯಯಗಳು ಎಂದರೆ - ಕ್ರಿಯಾಪದದ ಅರ್ಥ ಕೊಡುವ ಬೇಕು, ಬೇಡ, ಉಂಟು, ಇಲ್ಲ, ಅಲ್ಲ, ಸಾಕು, ಹೌದು ಮುಂತಾದ ಅವ್ಯಯಗಳು.
  • ದ್ವಿರುಕ್ತಿ ಎಂದರೆ - ಒಂದು ಪದವನ್ನು ಎರಡು ಬಾರಿ ಉಚ್ಚರಿಸುವುದು.
  • ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ಹೀಗೆನ್ನುವರು - ದ್ವಿರುಕ್ತಿ.
  • ದ್ವಿರುಕ್ತಿಗಳಿಗೆ ಉದಾಹರಣೆಗಳು - ಹೌದು ಹೌದು, ದೊಡ್ಡ ದೊಡ್ಡ, ಮನೆಮನೆ, ಎಲೆಲೆ, ಕಳ್ಳಾ ಕಳ್ಳಾ, ಅಗೋ ಅಗೋ, ಬನ್ನಿ ಬನ್ನಿ, ಅಬ್ಬಬ್ಬಾ, ಬೇಡ ಬೇಡ, ಮೊಟ್ಟಮೊದಲು ಇತ್ಯಾದಿ.
  • ಕಾಯಕನರು, ದೇವರುಗೀವರು, ಬಟ್ಟೆಬರೆ, ಸಾಲಸೋಲ ಇವು - ಜೋಡುನುಡಿಗಳು.


Post a Comment

0 Comments

Close Menu