Ad Code

ಅಲಂಕಾರಗಳು


  • ಅಲಂಕಾರಗಳು ಎಂದರೆ - ಅರ್ಥದ ಚಮತ್ಕಾರದಿಂದಲೂ, ಶಬ್ದಗಳ ಚಮತ್ಕಾರದಿಂದಲೂ ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ನುಡಿಗಳು.
  • ಅರ್ಥಾಲಂಕಾರ ಎಂದರೆ - ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸುವ ನುಡಿಗಳು.
  • ಶಬ್ದಾಲಂಕಾರ ಎಂದರೆ - ಶಬ್ದಗಳ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸುವ ನುಡಿಗಳು.
  • ಅಲಂಕಾರ ಕುರಿತು ಗ್ರಂಥಗಳನ್ನು ಬರೆದಿದ್ದವರನ್ನು ಹೀಗೆಂದು ಕರೆಯುವರು - ಲಾಕ್ಷಣಿಕರು.
  • 'ಕಾವ್ಯಾವಲೋಕನ' ಎಂಬ ಲಕ್ಷಣಗ್ರಂಥವನ್ನು ಬರೆದವನು - ಎರಡನೇ ನಾಗವರ್ಮ.
  • 'ಅಪ್ರತಿಮವೀರ ಚರಿತ್ರೆ' ಎಂಬ ಲಕ್ಷಣಗ್ರಂಥವನ್ನು ಬರೆದವನು - ತಿರುಮಲಾರ್ಯ.
  • ತಿರುಮಲಾರ್ಯನು ಈ ಅರಸನ ಆಸ್ಥಾನ ಪಂಡಿತನಾಗಿದ್ದನು - ಮೈಸೂರಿನ ಚಿಕ್ಕದೇವರಾಜ ಒಡೆಯರ್.
  • 'ಕನ್ನಡ ಕುವಲಯಾನಂದ' ಎಂಬ ಲಕ್ಷಣಗ್ರಂಥವನ್ನು ಬರೆದವನು - ಚಾಯಪ್ಪದೇಸಾಯಿ.
  • ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ - ಉಪಮಾಲಂಕಾರ.
  • ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕ ಈ ನಾಲ್ಕೂ ಬಂದಿದ್ದರೆ ಅದು - ಪೂರ್ಣೋಪಮಾಲಂಕಾರ.
  • ಉಪಮೇಯ, ಉಪಮಾನ, ಸಮಾನಧರ್ಮ, ಉಪಮಾವಾಚಕಗಳಲ್ಲಿ ಒಂದಾದರೂ, ಕೆಲವಾದರೂ ಸ್ಪಷ್ಟವಾಗಿ ಹೇಳಿರದಿದ್ದರೆ ಅದು - ಲುಪ್ತೋಪಮಾಲಂಕಾರ.
  • ವರ್ಣಿಸುವ ವಸ್ತು ಇನ್ನೊಂದರಂತೆ ಇದೆ ಎಂದು ಹೇಳದೆ, ಎರಡೂ ವಸ್ತುಗಳು (ಉಪಮೇಯ ಮತ್ತು ಉಪಮಾನ) ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ - ಅಭೇದರೂಪಕಾಲಂಕಾರ.
  • ಒಂದಾನೊಂದು ಪದಾರ್ಥವನ್ನೋ, ಅಥವಾ ಸನ್ನಿವೇಶವನ್ನೋ ಮತ್ತೊಂದನ್ನಾಗಿ ಸಂಭಾವಿಸಿ (ಕಲ್ಪಿಸಿ) ವರ್ಣಿಸುವುದೇ - ಉತ್ಪ್ರೇಕ್ಷಾಲಂಕಾರ.
  • ಎರಡು ಬೇರೆ ಬೇರೆ ವಾಕ್ಯಗಳು ಅರ್ಥಸಾಮ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬವಾದಂತೆ ತೋರುತ್ತಿದ್ದರೆ ಅದು - ದೃಷ್ಟಾಂತಾಲಂಕಾರ.
  • ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದೇ - ಅರ್ಥಾಂತರನ್ಯಾಸಾಲಂಕಾರ.
  • ಬೇರೆ ಬೇರೆ ಅರ್ಥಗಳನ್ನು ಹೊಂದಿದ ಒಂದೇ ಶಬ್ದವು ವರ್ಣಿಸುವ ವಿಷಯ ಮತ್ತು ಅವರ್ಣ್ಯವಾದ ವಿಷಯಗಳ ಪರವಾಗಿ ಬೇರೆ ಬೇರೆ ಅರ್ಥ ಕೊಡುವುದೇ - ಶ್ಲೇಷಾಲಂಕಾರ.
  • ಶಬ್ದಾಲಂಕಾರದಲ್ಲಿರುವ ಎರಡು ವಿಧಗಳು - ಅನುಪ್ರಾಸ ಮತ್ತು ಯಮಕ.
  • ಅನುಪ್ರಾಸದಲ್ಲಿರುವ ಎರಡು ವಿಧಗಳು - ವೃತ್ಯನುಪ್ರಾಸ ಮತ್ತು ಛೇಕಾನುಪ್ರಾಸ.
  • ಒಂದಾಗಲಿ, ಎರಡಾಗಲಿ ವ್ಯಂಜನಗಳು ಪುನಃ ಪುನಃ ಹೇಳಲ್ಪಟ್ಟಿದ್ದರೆ ಅದು - ವೃತ್ಯನುಪ್ರಾಸ.
  • ಎರಡೇಡು ವ್ಯಂಜನಗಳಿಂದ ಕೂಡಿದ ಶಬ್ದವು ಪುನಃ ಪುನಃ ಪದ್ಯದಲ್ಲಿ ಬಂದಿದ್ದರೆ ಅದು - ಛೇಕಾನುಪ್ರಾಸ.
  • ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಪದಭಾಗವೋ ಒಂದು ಪದ್ಯದ ಆದಿ, ಮಧ್ಯ, ಅಂತ್ಯ ಸ್ಥಾನಗಳಲ್ಲಿ ಎಲ್ಲಿಯಾದರೂ ನಿಯತವಾಗಿ ಬಂದಿದ್ದರೆ ಅದು - ಯಮಕಾಲಂಕಾರ.


Post a Comment

0 Comments

Close Menu