ಹರಿಹರೇಶ್ವರನೆಂಬ ಕವಿಯು ಈ ಛಂದಸ್ಸಿನಲ್ಲಿ ಕಾವ್ಯಗಳನ್ನು ರಚಿಸಿದನು - ರಗಳೆಯ ಛಂದಸ್ಸು.
ರಾಘವಾಂಕನು ಈ ಛಂದಸ್ಸಿನಲ್ಲಿ ಕಾವ್ಯಗಳನ್ನು ರಚಿಸಿದನು - ಷಟ್ಪದಿಗಳ ಛಂದಸ್ಸು.
ರತ್ನಾಕರವರ್ಣಿಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಬರೆದ ಕೃತಿ - ಭರತೇಶ ವೈಭವ.
ಪದ್ಯಗಳು ಎಂದರೆ - ಒಂದು ಗೊತ್ತಾದ ಸಾಲುಗಳ ನಿಯಮದಿಂದ ಬರೆದವುಗಳು.
ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಹೀಗೆನ್ನುವರು - ಪ್ರಾಸ.
ಪ್ರಾಸಗಳಲ್ಲಿರುವ ವಿಧಗಳ ಸಂಖ್ಯೆ - ಆರು.
ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನ ಬಂದು ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಅದು - ಸಿಂಹಪ್ರಾಸ.
ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನ ಬಂದು ಹಿಂದಿನ ಸ್ವರ ದೀರ್ಘವಾಗಿದ್ದರೆ ಅದು - ಗಜಪ್ರಾಸ.
ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಅಂ) ಇದ್ದರೆ ಅದು - ವೃಷಭಪ್ರಾಸ.
ಪ್ರಾಸಾಕ್ಷರದ ಹಿಂದೆ ವಿಸರ್ಗ (ಅಃ) ಇದ್ದರೆ ಅದು - ಅಜಪ್ರಾಸ.
ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು - ಶರಭಪ್ರಾಸ.
ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಅದು - ಹಯಪ್ರಾಸ.
ಯತಿ ಎಂದರೆ - ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.
ಛಂದಶಾಸ್ತ್ರದಲ್ಲಿ ಗಣ ಎಂದರೆ - ಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.
ಒಂದು ಮಾತ್ರಾಕಾಲದಲ್ಲಿ ಉಚ್ಚಾರ ಮಾಡಲಾಗುವ ಅಕ್ಷರಗಳೆಲ್ಲ - ಲಘುಗಳು.
ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ - ಲಘುಗಳು.
ಎರಡು ಮಾತ್ರಗಳ ಕಾಲದಲ್ಲಿ ಉಚ್ಚರಿಸಲ್ಪಟ್ಟ ಅಕ್ಷರಗಳೆಲ್ಲ - ಗುರುಗಳು.
ಗುರುಗಳಾಗುವ ಅಕ್ಷರಗಳು ಇವು - ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು, ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ, ಷಟ್ಪದಿಗಳಲ್ಲಿ ಬರುವ ಮೂರನೆಯ ಆರನೆಯ ಸಾಲಿನ ಕೊನೆಯಲ್ಲಿರುವ ಅಕ್ಷರಗಳು.
ಮಾತ್ರಾಗಣಗಳು ಎಂದರೆ - ಮೂರು, ನಾಲ್ಕು, ಐದು ಮಾತ್ರಗಳ ಗುಂಪುಗಳ ಲೆಕ್ಕವಿಟ್ಟುಕೊಂಡು ವಿಭಾಗಿಸುವ ಗಣಗಳು.
ಪದ್ಯಗಳ ಸಾಲುಗಳ ಅಕ್ಷರಗಳಿಗೆ ಗುರುಲಘುಗಳ ಗುರುತು ಮಾಡುವುದಕ್ಕೆ ಹೀಗೆಂದು ಹೆಸರು - ಪ್ರಸ್ತಾರ.
ಮಾತ್ರಾಗಣಗಳಿಂದ ಪದ್ಯಜಾತಿಗಳು ಇವಾಗಿವೆ - ಕಂದ, ಷಟ್ಪದಿ, ರಗಳೆ ಇತ್ಯಾದಿ.
ಕಂದ ಪದ್ಯವೆಂದರೆ - ನಾಲ್ಕು ಸಾಲುಗಳಿಂದ ಕೂಡಿದ ಪದ್ಯ.
ಕಂದ ಪದ್ಯದಲ್ಲಿ ಒಂದನೆಯ ಮೂರನೆಯ ಸಾಲುಗಳು ಸಮಾನವಾಗಿದ್ದು ಅವು - ನಾಲ್ಕು ಮಾತ್ರೆಯ ಮೂರು ಗಣಗಳಿಂದ ಕೂಡಿರುತ್ತವೆ.
ಕಂದ ಪದ್ಯದಲ್ಲಿನ ಮೂರನೆಯ ನಾಲ್ಕನೆಯ ಸಾಲುಗಳು ಸಮವಾಗಿದ್ದು ಅವು - ನಾಲ್ಕು ಮಾತ್ರೆಯ ಐದು ಗಣಗಳಿಂದ ಕೂಡಿರುತ್ತವೆ.
ಷಟ್ಪದಿ ಎಂದರೆ - ಆರು ಸಾಲುಗಳಿಂದ ಕೂಡಿದ ಪದ್ಯ.
ಷಟ್ಪದಿಯಲ್ಲಿರುವ ವಿಧಗಳ ಸಂಖ್ಯೆ - ಆರು.
ಷಟ್ಪದಿಯಲ್ಲಿರುವ ಆರು ವಿಧಗಳು - ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಷಟ್ಪದಿಗಳು.
ಶರ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ಎರಡು ಗಣಗಳಿಂದ ಕೂಡಿರುತ್ತವೆ.
ಶರ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ಮೂರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
ಕುಸುಮ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ಎರಡು ಗಣಗಳಿಂದ ಕೂಡಿರುತ್ತವೆ.
ಕುಸುಮ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ಮೂರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
ಭೋಗ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
ಭೋಗ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
ಭಾಮಿನಿ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮತ್ತು ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
ಭಾಮಿನಿ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಮೂರು ಮತ್ತು ನಾಲ್ಕು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
ಪರಿವರ್ಧಿನಿ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
ಪರಿವರ್ಧಿನಿ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ನಾಲ್ಕು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
ವಾರ್ಧಕ ಷಟ್ಪದಿಯ 1, 2, 4, 5ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿರುತ್ತವೆ.
ವಾರ್ಧಕ ಷಟ್ಪದಿಯ 3, 6ನೇಯ ಸಾಲುಗಳು ಸಮನಾಗಿದ್ದು ಅವು - ಐದು ಮಾತ್ರೆಯ ಆರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ.
ರಗಳೆಯಲ್ಲಿರುವ ಮೂರು ವಿಧಗಳು - ಉತ್ಸಾಹರಗಳೆ, ಮಂದಾನಿಲರಗಳೆ ಮತ್ತು ಲಲಿತರಗಳೆ.
ಎರಡೇಡು ಸಾಲುಗಳಲ್ಲಿ ಪ್ರಾಸನಿಯಮವಿಟ್ಟುಕೊಂಡು ಮೂರು ಮಾತ್ರೆಯ ನಾಲ್ಕು ಗಣಗಳ ಗಣನಿಯಮದಿಂದ ಸಾಲುಗಳ ನಿಯಮವಿಲ್ಲದೆ ಇರುವ ಪದ್ಯಜಾತಿಯೇ - ಉತ್ಸಾಹರಗಳೆ.
ನಾಲ್ಕು ಮಾತ್ರೆಯ ನಾಲ್ಕು ಗಣ ಪ್ರತಿಯೊಮ್ಮೆಯೂ ಬಂದು ಎರಡೇಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೇ ಹೀಗೆನ್ನುವರು - ಮಂದಾನಿಲರಗಳೆ.
ಸಾಲುಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲದೆ, ಪ್ರತಿಯೊಂದು ಪಾದದಲ್ಲೂ ಐದು ಮಾತ್ರೆಯ ನಾಲ್ಕು ಗಣಗಳನ್ನಿಟ್ಟು ಎರಡೇಡು ಸಾಲುಗಳಲ್ಲಿ ಪ್ರಾಸನಿಯಮವನ್ನು ಮುಖ್ಯವಾಗಿ ಆದಿಯಲ್ಲಿ ಪಾಲಿಸಿಕೊಂಡು ಬರೆಯಲ್ಪಟ್ಟ ಪದ್ಯಗಳೇ - ಲಲಿತರಗಳೆ.
ಅಕ್ಷರಗಣಗಳು ಎಂದರೆ - ಮೂರು ಮೂರು ಅಕ್ಷರಗಳ ಗುಂಪುಗಳನ್ನು ಒಂದೊಂದು ಗಣವೆಂದು ತಿಳಿಯುವ ಗಣಗಳು.
ಮೂರು ಮೂರು ಅಕ್ಷರಗಳ ಲೆಕ್ಕದಿಂದ ಗಣಗಳನ್ನು ವಿಂಗಡಿಸುವುದು ಈ ಛಂದಸ್ಸುಗಳಲ್ಲಿ ಮಾತ್ರ - ವೃತ್ತಜಾತಿಯ ಛಂದಸ್ಸು.
ಅಕ್ಷರಗಣಗಳಲ್ಲಿರುವ ವಿಧಗಳ ಸಂಖ್ಯೆ - ಎಂಟು.
ಮೂರು ಗುರು ಬರುವ ಮೂರಕ್ಷರದ ಗಣವೇ - ಮಗಣ.
ಮೂರು ಲಘು ಬರುವ ಮೂರಕ್ಷರದ ಗಣವೇ - ನಗಣ.
ಗುರು ಮೊದಲು ಬಂದು ಎರಡು ಲಘು ಬರುವ ಗಣವೇ - ಭಗಣ.
ಲಘು ಮೊದಲು ಬಂದು ಎರಡು ಗುರು ಬರುವ ಗಣವೇ - ಯಗಣ.
ಗುರು ನಡುವೆ ಬರುವ ಗಣವೇ - ಜಗಣ.
ಲಘು ನಡುವೆ ಬರುವ ಗಣವೇ - ರಗಣ.
ಗುರು ಕೊನೆಯಲ್ಲಿ ಬರುವ ಗಣವೇ - ಸಗಣ.
ಲಘು ಕೊನೆಯಲ್ಲಿ ಬರುವ ಗಣವೇ - ತಗಣ.
ಎಂಟು ಅಕ್ಷರಗಣಗಳನ್ನು ನೆನಪಿಡಲು ಈ ಸೂತ್ರವನ್ನು ಬಳಸುತ್ತಾರೆ - ಯಮಾತಾರಾಜಭಾನಸಲಗಂ.
ಪ್ರತಿ ಸಾಲಿನಲ್ಲೂ ಭ, ರ, ನ, ಭ, ಭ, ರ ಗಣಗಳೂ, ಮೇಲೆ ಒಂದು ಲಘು ಮತ್ತು ಒಂದು ಗುರು ಬರುವ ವೃತ್ತವೇ - ಉತ್ಪಲಮಾಲಾವೃತ್ತ.
ಉತ್ಪಲಮಾಲಾವೃತ್ತವನ್ನು ನೆನಪಿಡಲು ಬಳಸುವ ಸೂತ್ರ - ಉತ್ಪಲಮಾಲೆಯುವುದು ಭರಂ ನಭಭ ರಲಗಂ ನೆಗಳಿರ್ಲ್.
ಪ್ರತಿ ಸಾಲಿನಲ್ಲೂ ನ, ಜ, ಭ, ಜ, ಜ, ಜ, ರ ಎಂಬ ಏಳು ಗಣಗಳಿರುವ ವೃತ್ತವೇ - ಚಂಪಕಮಾಲಾವೃತ್ತ.
ಚಂಪಕಮಾಲಾವೃತ್ತವನ್ನು ನೆನಪಿಡಲು ಬಳಸುವ ಸೂತ್ರ - ನಜಭಜಜಂಜರಂ ಬಗೆಗೊಳ್ವುದಿರೆ ಚಂಪಕಮಾಲೆಯೆಂದಪರ್.
ಪ್ರತಿಯೊಂದು ಪಾದದಲ್ಲೂ ಮ, ಸ, ಜ, ಸ, ತ, ತ ಎಂಬ ಆರು ಗಣಗಳೂ, ಮೇಲೆ ಒಂದು ಗುರುವೂ ಇರುವ ವೃತ್ತವೇ - ಶಾರ್ದೂಲವಿಕ್ರೀಡಿತವೃತ್ತ.
ಶಾರ್ದೂಲವಿಕ್ರೀಡಿತವೃತ್ತವನ್ನು ನೆನಪಿಡಲು ಬಳಸುವ ಸೂತ್ರ - ಕಣ್ಕಪ್ಪಲ್ ಮಸಜಂಸತತಂಗಮುಮಾ ಶಾರ್ದೂಲವಿಕ್ರೀಡಿತಂ.
ಪ್ರತಿ ಸಾಲಿನಲ್ಲಿಯೂ ಸ, ಭ, ರ, ನ, ಮ, ಯ ಗಣಗಳಿಂದಲೂ, ಮೇಲೊಂದು ಲಘು ಮತ್ತು ಒಂದು ಗುರುವಿನಿಂದಲೂ ಕೂಡಿದ ಪದ್ಯಜಾತಿಯೇ - ಮತ್ತೇಭವಿಕ್ರೀಡಿತವೃತ್ತ.
ಮತ್ತೇಭವಿಕ್ರೀಡಿತವೃತ್ತದ ಲಕ್ಷಣಗಳನ್ನು ತಿಳಿಸುವ ಸೂತ್ರ - ಸಭರನಂದಯಲಂಗಮುಂ ಬಗೆಗೊಳ್ ಮತ್ತೇಭವಿಕ್ರೀಡಿತಂ.
ಪ್ರತಿಯೊಂದು ಪಾದದಲ್ಲೂ ಮ, ರ, ಭ, ನ, ಯ, ಯ, ಯ ಗಣಗಳಿರುವ ವೃತ್ತವೇ - ಸ್ರಗ್ಧರಾವೃತ್ತ.
0 Comments