Home Kannada Tables ಕೃದಂತ ಮತ್ತು ತದ್ಧಿತಾಂತ ಪ್ರಕರಣ
ಕೃದಂತ ಮತ್ತು ತದ್ಧಿತಾಂತ ಪ್ರಕರಣ
ನಾಲ್ಕು ವಿಧವಾದ ನಾಮಪ್ರಕೃತಿಗಳು ಇವು - ಸಹಜನಾಮಪ್ರಕೃತಿಗಳು, ಕೃದಂತಗಳು, ತದ್ಧಿತಾಂತಗಳು ಮತ್ತು ಸಮಾಸಗಳು. ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿದರೆ ಅದು - ಕೃದಂತಗಳು. ಕೃದಂತಗಳಿಗಿರುವ ಮತ್ತೊಂದು ಹೆಸರು - ಕೃನ್ನಾಮಗಳು. ಕೃದಂತಗಳಲ್ಲಿರುವ ಮೂರು ವಿಧಗಳು - ಕೃದಂತನಾಮ, ಕೃದಂತ ಭಾವನಾಮ ಮತ್ತು ಕೃದಂತಾವ್ಯಯ. ಕೃದಂತನಾಮಗಳಿಗೆ ಉದಾಹರಣೆಗಳೆಂದರೆ - ಮಾಡಿದ, ಬರೆಯುವ, ತಿನ್ನುವ, ನಡೆಯುವ, ಹೋಗದ ಇತ್ಯಾದಿ. ಕೃದಂತ ಭಾವನಾಮಗಳಿಗೆ ಉದಾಹರಣೆಗಳೆಂದರೆ - ಮಾಟ, ತಿನ್ನುವಿಕೆ, ನಡೆತ, ಹೋಗುವಿಕೆ ಇತ್ಯಾದಿ. ಕೃದಂತಾವ್ಯಯಗಳಿಗೆ ಉದಾಹರಣೆಗಳೆಂದರೆ - ಮಾಡಿ, ತಿಂದು, ನಡೆಯುತ್ತಾ, ಹೋಗಲು ಇತ್ಯಾದಿ. ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದರೆ ಅದು - ಕೃದಂತಭಾವನಾಮ ಅಥವಾ ಭಾವಕೃದಂತ. ಕೃದಂತಾವ್ಯಯಗಳು ಎಂದರೆ - ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂತಹ ಶಬ್ದ ರೂಪಗಳು. ತದ್ಧಿತ ಎಂಬ ಪ್ರತ್ಯಯವನ್ನು ಅಂತ್ಯದಲ್ಲಿ ಉಳ್ಳದ್ದೇ - ತದ್ಧಿತಾಂತ. 'ಮೋಸಗಾರ' ಎಂಬ ಪದದಲ್ಲಿರುವ ತದ್ಧಿತ ಪ್ರತ್ಯಯ -ಗಾರ. ನಾಮಪದಗಳ ಮೇಲೆ ಹಲವಾರು ಅರ್ಥಗಳಲ್ಲಿ ಗಾರ, ಕಾರ, ಇಗ, ಆಡಿಗೆ, ವಂತ, ವಳ, ಇಕ, ಆಳಿ ಇತ್ಯಾದಿ ಪ್ರತ್ಯಯಗಳು ಸೇರಿದಾಗ ಅದು - ತದ್ಧಿತಾಂತ. ತದ್ಧಿತಾಂತಗಳಲ್ಲಿರುವ ಮೂರು ವಿಧಗಳು ಇವು - ತದ್ಧಿತಾಂತ ನಾಮ, ತದ್ಧಿತಾಂತ ಭಾವನಾಮ ಮತ್ತು ತದ್ಧಿತಾಂತಾವ್ಯಯ. ತದ್ಧಿತಾಂತ ನಾಮಗಳಿಗೆ ಉದಾಹರಣೆಗಳೆಂದರೆ - ಬಳಗಾರ, ಓಲೆಕಾರ, ಕನ್ನಡಿಗ, ಹಣವಂತ, ಮಡಿವಾಳ, ಹೂವಾಡಿಗ, ಬಿಳಿಕ, ವಾಚಾಳಿ, ಕುಂಬಾರ ಇತ್ಯಾದಿ. ತದ್ಧಿತಾಂತ ಭಾವನಾಮ ಉದಾಹರಣೆಗಳೆಂದರೆ - ಬಡತನ, ಜಾಣತನ, ಬ್ರಾಹ್ಮಣಿಕೆ, ಕಿವುಡು, ಬಿಳುಪು, ಜಾಣ್ಮೆ ಇತ್ಯಾದಿ. ನಾಮಪದಗಳ ಮುಂದೆ ಅಂತೆ, ಪೂಲ್, ವೋಲು, ತನಕ, ವರೆಗೆ, ಮಟ್ಟಿಗೆ, ಒನ್ನರ, ಇಂತ, ಒಸುಗ, ಆಗಿ ಮುಂತಾದ ಪ್ರತ್ಯಯಗಳು ಸೇರಿದರೆ ಅದು - ತದ್ಧಿತಾಂತಾವ್ಯಯ. ತದ್ಧಿತಾಂತಾವ್ಯಯಗಳಿಗೆ ಉದಾಹರಣೆಗಳೆಂದರೆ - ರಾಮನಂತೆ, ಚಂದ್ರನವೊಲು, ಮನೆಯತನಕ, ಊರವರೆಗೆ, ಅವನಮಟ್ಟಿಗೆ, ನಿನಗೋಸ್ಕರ, ನನ್ನ ಸಲುವಾಗಿ, ಇವನಿಗಿಂತ, ನಿನಗಾಗಿ, ರಾಮನಿಗೋಸುಗ ಇತ್ಯಾದಿ.
These below are Trending in Krishicode Website !!!!
Thursday, January 01, 2026
0 Comments