Home Kannada Tables ಅವ್ಯಯ ಪ್ರಕರಣ
ಅವ್ಯಯ ಪ್ರಕರಣ
ಅವ್ಯಯ ಎಂದರೆ - ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ, ಏಕರೂಪವಾಗಿರುವ ಶಬ್ದಗಳು. ಅವ್ಯಯಗಳಿಗೆ ಉದಾಹರಣೆಗಳೆಂದರೆ - ಚೆನ್ನಾಗಿ, ಸುಮ್ಮನೆ, ನೆಟ್ಟಗೆ, ಸುತ್ತಲೂ, ಮೆಲ್ಲಗೆ, ತರುವಾಯ ಇತ್ಯಾದಿ. ಸಾಮಾನ್ಯಾವ್ಯಯಗಳು ಎಂದರೆ - ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂಥ ಅವ್ಯಯಗಳು. ಸಾಮಾನ್ಯಾವ್ಯಯಗಳಿಗೆ ಉದಾಹರಣೆಗಳೆಂದರೆ - ಚೆನ್ನಾಗಿ, ಕೂಡಲೆ, ಬೇಗ, ಬೇರೆ, ಬಳಿಕ, ಸೊಗಸಾಗಿ ಇತ್ಯಾದಿ. ಅನುಕರಣಾವ್ಯಯಗಳು ಎಂದರೆ - ಅರ್ಥವಿಲ್ಲದ ಧ್ವನಿವಿಶೇಷಗಳನ್ನು ತಾನು ಕೇಳಿದಂತೆ ಪುನಃ ಅನುಕರಣ ಮಾಡಿ ಹೇಳುವ ಶಬ್ದಗಳು. ಅನುಕರಣಾವ್ಯಯಗಳಿಗೆ ಉದಾಹರಣೆಗಳೆಂದರೆ - ಡಬಡಬ, ಪಟಪಟ, ಚಟಚಟ, ಕರಕರ, ಸುಯ್ಯನೆ, ರೊಯ್ಯನೆ, ಜುಳುಜುಳು ಗಡಗಡ ಇತ್ಯಾದಿ. ಭಾವಸೂಚಕಾವ್ಯಯಗಳು ಎಂದರೆ - ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಬಳಸುವ ಕೆಲವು ಅರ್ಥವಿಲ್ಲದ ಶಬ್ದಗಳು. ಭಾವಸೂಚಕಾವ್ಯಯಗಳಿಗೆ ಇರುವ ಮತ್ತೊಂದು ಹೆಸರು - ನಿಪಾತಾವ್ಯಯಗಳು. ಭಾವಸೂಚಕಾವ್ಯಯಗಳಿಗೆ ಉದಾಹರಣೆಗಳೆಂದರೆ - ಎಲಾ, ಅಯ್ಯೋ, ಅಬ್ಬಾ, ಧೂ, ಭೇ, ಓಹೋ, ಭಲೇ ಇತ್ಯಾದಿ. ಕ್ರಿಯಾರ್ಥಕಾವ್ಯಯಗಳು ಎಂದರೆ - ಕ್ರಿಯಾಪದದ ಸ್ಥಾನದಲ್ಲಿ ನಿಂತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಕೆಲವು ಅವ್ಯಯಗಳು. ಕ್ರಿಯಾರ್ಥಕಾವ್ಯಯಗಳಿಗೆ ಉದಾಹರಣೆಗಳೆಂದರೆ - ಉಂಟು, ಬೇಕು, ಬೇಡ, ಸಾಕು, ಇಲ್ಲ ಹೌದು ಇತ್ಯಾದಿ. ಸಂಬಂಧಾರ್ಥಕಾವ್ಯಯಗಳು ಎಂದರೆ - ಎರಡು ಪದಗಳನ್ನಾಗಲಿ ಅಥವಾ ಹಲವು ಪದಸಮುಚ್ಚಯಗಳನ್ನಾಗಲಿ, ವಾಕ್ಯಗಳನ್ನಾಗಲಿ, ಜೋಡಿಸುವಂತಹ ಮತ್ತು ಸಂಬಂಧಗೊಳಿಸುವಂತಹ ಶಬ್ದಗಳು. ಸಂಬಂಧಾರ್ಥಕಾವ್ಯಯಗಳಿಗೆ ಉದಾಹರಣೆಗಳು - ಉ, ಉಂ, ಅಥವಾ, ಆದ್ದರಿಂದ, ಅಲ್ಲದೆ, ಮತ್ತು ಇತ್ಯಾದಿ. ಅವಧಾರಣಾರ್ಥಕಾವ್ಯಯ ಎಂದರೆ - ಒಂದು ನಿಶ್ಚಯಾರ್ಥದಲ್ಲಿ ಬರುವ ಅವ್ಯಯ. ಅವಧಾರಣಾರ್ಥಕಾವ್ಯಯಗಳಿಗೆ ಉದಾಹರಣೆಗಳು - ಅದೇ, ಅವನೇ, ನಾನೇ, ಈ ರೀತಿಯ ಪದಗಳಲ್ಲಿರುವ ಏ ಕಾರ.
These below are Trending in Krishicode Website !!!!
Thursday, January 01, 2026
0 Comments