ಸಂಧಿ ಪ್ರಕರಣ
- ಸಂಧಿ ಎಂದರೆ - ಎರಡು ಅಕ್ಷರಗಳು ಪರಸ್ಪರ ಯಾವ ಕಾಲ ವಿಳಂಬವೂ ಇಲ್ಲದೇ ಸೇರುವುದು.
- ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು - ಸ್ವರಸಂಧಿ.
- ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನ ಬಂದು ಸಂಧಿಯಾದರೆ ಅದು - ವ್ಯಂಜನಸಂಧಿ.
- ಸಂಧಿಯಾಗುವಾಗ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವ ಕೆಲವು ವ್ಯತ್ಯಾಸಗಳನ್ನು ಹೀಗೆಂದು ಕರೆಯುವರು - ಸಂಧಿಕಾರ್ಯ.
- ಸಂಧಿಗಳಲ್ಲಿರುವ ಎರಡು ವಿಧಗಳು - ಕನ್ನಡ ಸಂಧಿ ಮತ್ತು ಸಂಸ್ಕೃತ ಸಂಧಿ.
- ಮೂರು ಕನ್ನಡ ಸಂಧಿಗಳು ಇವು - ಲೋಪ ಸಂಧಿ, ಆಗಮ ಸಂಧಿ ಮತ್ತು ಆದೇಶ ಸಂಧಿ.
- ಸಂಧಿಕ್ರಿಯೆ ಆಗುವಾಗ ಸ್ವರದ ಮುಂದೆ ಸ್ವರ ಬಂದು ಪೂರ್ವಪದದ ಸ್ವರ ಲೋಪವಾದರೆ ಅದು - ಲೋಪಸಂಧಿ.
- ಸ್ವರದ ಮುಂದೆ ಸ್ವರ ಬಂದು ಸಂಧಿಯಾಗುವಾಗ 'ಯ' ಕಾರ ಅಥವಾ 'ವ' ಕಾರವು ಈ ಸ್ವರಗಳ ಮಧ್ಯೆ ಹೊಸದಾಗಿ ಬಂದು ಸೇರಿದರೆ ಅದು - ಆಗಮ ಸಂಧಿ.
- ಸಂಧಿಕ್ರಿಯೆ ಆಗುವಾಗ ಉತ್ತರ ಪದದ ಆದಿಯಲ್ಲಿರುವ ವ್ಯಂಜನದ ಬದಲಿಗೆ ಬೇರೊಂದು ವ್ಯಂಜನ ಬಂದು ಸೇರಿದರೆ ಅದು - ಆದೇಶ ಸಂಧಿ.
- ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವುದು - ಪ್ರಕೃತಿಭಾವ.
- 'ಬೇರೊಬ್ಬ' ಈ ಪದದಲ್ಲಿರುವ ಸಂಧಿ - ಲೋಪಸಂಧಿ.
- 'ನಿನಗಲ್ಲದೆ' ಪದವನ್ನು ಬಿಡಿಸಿ ಬರೆದಾಗ - ನಿನಗೆ + ಅಲ್ಲದೆ.
- 'ನಾವೆಲ್ಲಾ' ಈ ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಲೋಪಸಂಧಿ.
- 'ಆಡಿಸು' ಪದದಲ್ಲಿರುವ ಸಂಧಿ - ಲೋಪಸಂಧಿ.
- 'ಅವನೂರು' ಪದವನ್ನು ಬಿಡಿಸಿ ಬರೆದಾಗ - ಅವನ + ಊರು.
- 'ಕೈಯನ್ನು' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಆಗಮ ಸಂಧಿ.
- 'ಕೈಯನ್ನು' ಪದವನ್ನು ಬಿಡಿಸಿ ಬರೆದಾಗ - ಕೈ + ಅನ್ನು.
- 'ಮಗುವಿಗೆ' ಈ ಪದದಲ್ಲಿರುವ ಸಂಧಿ - ಆಗಮ ಸಂಧಿ.
- 'ಮಗುವಿಗೆ' ಪದವನ್ನು ಬಿಡಿಸಿ ಬರೆದಾಗ - ಮಗು + ಇಗೆ.
- ಆ, ಇ, ಈ, ಎ, ಐ, ಏ ಗಳ ಮುಂದೆ ಸ್ವರ ಬಂದಾಗ ಆ ಎರಡು ಸ್ವರಗಳ ಮಧ್ಯದಲ್ಲಿ 'ಯ್' ಕಾರವು ಬಂದು ಸೇರಿದರೆ ಅದು - ಯಕಾರಾಗಮ ಸಂಧಿ.
- ಯಕಾರಾಗಮ ಸಂಧಿಗೆ ಕೆಲವು ಉದಾಹರಣೆಗಳೆಂದರೆ - ಕಾಯದೆ, ಮೀಯಲು, ಗಿರಿಯನ್ನು, ಮೇಯಿಸು ಮುಂತಾದವು.
- ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದಾಗ ನಡುವೆ 'ವ್' ಕಾರವು ಬಂದು ಸೇರಿದರೆ ಅದು - ವಕಾರಾಗಮ ಸಂಧಿ.
- ವಕಾರಾಗಮ ಸಂಧಿಗೆ ಕೆಲವು ಉದಾಹರಣೆಗಳೆಂದರೆ - ಮದುವನ್ನು, ಗೋವನ್ನು, ಹೂವಿಂದ ಮುಂತಾದವು.
- 'ಇಂಚರ' ಪದದಲ್ಲಿರುವ ಸಂಧಿ - ಆದೇಶ ಸಂಧಿ.
- ಎರಡು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಅದು - ಸಂಸ್ಕೃತ ಸಂಧಿ.
- ಒಂದು ಸಂಸ್ಕೃತ ಪದ ಕನ್ನಡ ಪದದೊಡನೆ ಸೇರಿ ಸಂಧಿಯಾದರೆ ಅದು - ಕನ್ನಡ ಸಂಧಿ.
- ಸವರ್ಣಸ್ವರಗಳು ಒಂದರ ಮುಂದೆ ಒಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬಂದರೆ ಅದು - ಸವರ್ಣದೀರ್ಘ ಸಂಧಿ.
- 'ವಿದ್ಯಾಭ್ಯಾಸ' ಪದದಲ್ಲಿರುವ ಸಂಧಿ - ಸವರ್ಣದೀರ್ಘ ಸಂಧಿ.
- 'ವಿದ್ಯಾಭ್ಯಾಸ' ಪದವನ್ನು ಬಿಡಿಸಿ ಬರೆದಾಗ - ವಿದ್ಯಾ + ಅಭ್ಯಾಸ.
- 'ಹರೀಶ್ವರ' ಪದವು ಈ ಸಂಧಿಗೆ ಉದಾಹರಣೆ - ಸವರ್ಣದೀರ್ಘ ಸಂಧಿ.
- 'ಹರೀಶ್ವರ' ಪದವನ್ನು ಬಿಡಿಸಿ ಬರೆದಾಗ - ಹರಿ + ಈಶ್ವರ.
- 'ಗುರೂಪದೇಶ' ಪದದಲ್ಲಿರುವ ಸಂಧಿ - ಸವರ್ಣದೀರ್ಘ ಸಂಧಿ.
- 'ಗುರೂಪದೇಶ' ಪದವನ್ನು ಬಿಡಿಸಿ ಬರೆದಾಗ - ಗುರು + ಉಪದೇಶ.
- ಆ, ಆ ಕಾರಗಳ ಮುಂದೆ ಇ ಈ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ 'ಏ' ಕಾರವು ಆದೇಶವಾಗಿ ಬಂದರೆ ಅದು - ಗುಣಸಂಧಿ.
- ಆ, ಆ ಕಾರಗಳ ಮುಂದೆ ಉ ಊ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ 'ಓ' ಕಾರವು ಆದೇಶವಾಗಿ ಬಂದರೆ ಅದು - ಗುಣಸಂಧಿ.
- ಆ, ಆ ಕಾರಗಳ ಮುಂದೆ ಋ ಕಾರವು ಪರವಾದಾಗ ಅವೆರಡರ ಸ್ಥಾನದಲ್ಲಿ 'ಅರ್' ಕಾರವು ಆದೇಶವಾಗಿ ಬಂದರೆ ಅದು - ಗುಣಸಂಧಿ.
- 'ನರೇಂದ್ರ' ಪದದಲ್ಲಿರುವ ಸಂಧಿ - ಗುಣ ಸಂಧಿ.
- 'ನರೇಂದ್ರ' ಪದವನ್ನು ಬಿಡಿಸಿ ಬರೆದಾಗ - ನರ + ಇಂದ್ರ.
- 'ಮಹೇಂದ್ರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಗುಣಸಂಧಿ.
- 'ಮಹೇಂದ್ರ' ಪದವನ್ನು ಬಿಡಿಸಿ ಬರೆದಾಗ - ಮಹಾ + ಇಂದ್ರ.
- 'ಚಂದ್ರೋದಯ' ಪದದಲ್ಲಿರುವ ಸಂಧಿ - ಗುಣಸಂಧಿ.
- 'ಚಂದ್ರೋದಯ' ಪದವನ್ನು ಬಿಡಿಸ ಬರೆದಾಗ - ಚಂದ್ರ + ಉದಯ.
- 'ಏಕೋನ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಗುಣಸಂಧಿ.
- 'ಏಕೋನ' ಪದವನ್ನು ಬಿಡಿಸಿ ಬರೆದಾಗ - ಏಕ + ಊನ.
- 'ಮಹರ್ಷಿ' ಪದದಲ್ಲಿರುವ ಸಂಧಿ - ಗುಣಸಂಧಿ.
- 'ಮಹರ್ಷಿ' ಪದವನ್ನು ಬಿಡಿಸಿ ಬರೆದಾಗ - ಮಹಾ + ಋಷಿ.
- ಆ ಆ ಕಾರಗಳಿಗೆ ಎ ಐ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ 'ಐ' ಕಾರವು ಆದೇಶವಾಗಿ ಬಂದರೆ ಅದು - ವೃದ್ಧಿ ಸಂಧಿ.
- ಆ ಆ ಕಾರಗಳಿಗೆ ಓ ಔ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ 'ಔ' ಕಾರವು ಆದೇಶವಾಗಿ ಬಂದರೆ ಅದು - ವೃದ್ಧಿ ಸಂಧಿ.
- 'ಲೋಕೈಕವೀರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ವೃದ್ಧಿ ಸಂಧಿ.
- 'ಲೋಕೈಕವೀರ' ಪದವನ್ನು ಬಿಡಿಸಿ ಬರೆದಾಗ - ಲೋಕ + ಏಕವೀರ.
- 'ವಿದ್ಯೈಶ್ವರ್ಯ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ವೃದ್ಧಿ ಸಂಧಿ.
- 'ವಿದ್ಯೈಶ್ವರ್ಯ' ಪದವನ್ನು ಬಿಡಿಸಿ ಬರೆದಾಗ - ವಿದ್ಯಾ + ಐಶ್ವರ್ಯ.
- 'ಜಲೌಘ' ಪದದಲ್ಲಿ ಈ ಸಂಧಿಯಿದೆ - ವೃದ್ಧಿ ಸಂಧಿ.
- 'ಜಲೌಘ' ಪದವನ್ನು ಬಿಡಿಸಿ ಬರೆದಾಗ - ಜಲ + ಓಘ.
- 'ಘನೌದಾರ್ಯ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ವೃದ್ಧಿ ಸಂಧಿ.
- 'ಘನೌದಾರ್ಯ' ಪದವನ್ನು ಬಿಡಿಸಿ ಬರೆದಾಗ - ಘನ + ಔದಾರ್ಯ.
- ಇ ಈ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದಾಗ 'ಯ್' ಕಾರವು ಆದೇಶವಾಗಿ ಬಂದರೆ ಅದು - ಯಣ್ ಸಂಧಿ.
- ಉ ಊ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದಾಗ 'ವ್' ಕಾರವು ಆದೇಶವಾಗಿ ಬಂದರೆ ಅದು - ಯಣ್ ಸಂಧಿ.
- ಋ ಕಾರಕ್ಕೆ ಸವರ್ಣವಲ್ಲದ ಸ್ವರ ಪರವಾದಾಗ 'ರ್' (ರೇಫ)ವು ಆದೇಶವಾಗಿ ಬಂದರೆ ಅದು - ಯಣ್ ಸಂಧಿ.
- 'ಅತ್ಯವಸರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಯಣ್ ಸಂಧಿ.
- 'ಅತ್ಯವಸರ' ಪದವನ್ನು ಬಿಡಿಸಿ ಬರೆದಾಗ - ಅತಿ + ಅವಸರ.
- 'ಗುರ್ವಾಜ್ಞೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಯಣ್ ಸಂಧಿ.
- 'ಗುರ್ವಾಜ್ಞೆ' ಪದವನ್ನು ಬಿಡಿಸಿ ಬರೆದಾಗ - ಗುರು + ಆಜ್ಞೆ.
- 'ಪಿತ್ರರ್ಥ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಯಣ್ ಸಂಧಿ.
- 'ಪಿತ್ರರ್ಥ' ಪದವನ್ನು ಬಿಡಿಸಿ ಬರೆದಾಗ - ಪಿತೃ + ಅರ್ಥ.
- ಕಚಟತಪಗಳಿಗೆ ಗಜಡದಬಗಳು ಆದೇಶವಾಗಿ ಬಂದರೆ ಅದು - ಜಶ್ಚ ಸಂಧಿ.
- ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಃ ಅದೇ ವರ್ಗದ ಮೂರನೇ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದೇ - ಜಶ್ಚ ಸಂಧಿ.
- 'ದಿಗೀಶ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಜಶ್ಚ ಸಂಧಿ.
- 'ದಿಗೀಶ' ಪದವನ್ನು ಬಿಡಿಸಿ ಬರೆದಾಗ - ದಿಕ್ + ಈಶ.
- 'ಅಜಂತ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಜಶ್ಚ ಸಂಧಿ.
- 'ಅಜಂತ' ಪದವನ್ನು ಬಿಡಿಸಿ ಬರೆದಾಗ - ಅಚ್ + ಅಂತೆ.
- 'ಷಡಂಗನೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಜಶ್ಚ ಸಂಧಿ.
- 'ಷಡಂಗನೆ' ಪದವನ್ನು ಬಿಡಿಸಿ ಬರೆದಾಗ - ಷಟ್ + ಅಂಗನೆ.
- 'ಸದುದ್ಯೋಗ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಜಶ್ಚ ಸಂಧಿ.
- 'ಸದುದ್ಯೋಗ' ಪದವನ್ನು ಬಿಡಿಸಿ ಬರೆದಾಗ - ಸತ್ + ಉದ್ಯೋಗ.
- 'ಅಬಂಶ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಜಶ್ಚ ಸಂಧಿ.
- 'ಅಬಂಶ' ಪದವನ್ನು ಬಿಡಿಸಿ ಬರೆದಾಗ - ಅಪ್ + ಅಂಶ.
- ಪದಗಳು ಒಂದಕ್ಕೊಂದು ಸಂಧಿಸಿದಾಗ ಸ ಕಾರದಲ್ಲಿಲ್ಲಾ ಶ ಕಾರವು, ತವರ್ಗದ ಅಕ್ಷರಗಳಿಲ್ಲದಿಲ್ಲಾ ಚವರ್ಗದ ಅಕ್ಷರಗಳು ಆದೇಶಗಳಾಗಿ ಬಂದರೆ ಅದು - ಶ್ಚುತ್ವ ಸಂಧಿ.
- ಸಕಾರತವರ್ಗಕ್ಷರಗಳಿಗೆ ಶಕಾರ ಚವರ್ಗಕ್ಷರಗಳು ಪರವಾದಾಗ ಸಕಾರಕ್ಕೆ ಶಕಾರವು, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬಂದರೆ ಅದು - ಶ್ಚುತ್ವ ಸಂಧಿ.
- 'ಮನಶ್ಚಂಚಲ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಶ್ಚುತ್ವ ಸಂಧಿ.
- 'ಮನಶ್ಚಂಚಲ' ಪದವನ್ನು ಬಿಡಿಸಿ ಬರೆದಾಗ - ಮನಶ್ + ಚಂಚಲ.
- 'ಶರಶ್ಚಂದ್ರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಶ್ಚುತ್ವಸಂಧಿ.
- 'ಶರಶ್ಚಂದ್ರ' ಪದವನ್ನು ಬಿಡಿಸಿ ಬರೆದಾಗ - ಶರತ್ + ಚಂದ್ರ.
- ಕ ಚ ಟ ತ ಪ ವ್ಯಂಜನಗಳಿಗೆ ಞ ಣ ಣ ನ ಮ ವ್ಯಂಜನಗಳು ಆದೇಶವಾಗಿ ಬಂದರೆ ಅದು - ಅನುನಾಸಿಕ ಸಂಧಿ.
- 'ವಾಜ್ಮಯ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಅನುನಾಸಿಕ ಸಂಧಿ.
- 'ವಾಜ್ಮಯ' ಪದವನ್ನು ಬಿಡಿಸಿ ಬರೆದಾಗ - ವಾಕ್ + ಮಯ.
- 'ಷಣ್ಮುಖ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಅನುನಾಸಿಕ ಸಂಧಿ.
- 'ಷಣ್ಮುಖ' ಪದವನ್ನು ಬಿಡಿಸಿ ಬರೆದಾಗ - ಷಟ್ + ಮುಖ.
- 'ಸನ್ಮಾನ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಅನುನಾಸಿಕ ಸಂಧಿ.
- 'ಸನ್ಮಾನ' ಪದವನ್ನು ಬಿಡಿಸಿ ಬರೆದಾಗ - ಸತ್ + ಮಾನ.
- 'ಅಮ್ಮಯ' ಪದವು ಈ ಸಂಧಿಗೆ ಉದಾಹರಣೆಯಾಗಿದೆ - ಅನುನಾಸಿಕ ಸಂಧಿ.
- 'ಅಮ್ಮಯ' ಪದವನ್ನು ಬಿಡಿಸಿ ಬರೆದಾಗ - ಅಪ್ + ಮಯ.
These below are Trending in Krishicode Website !!!!
Thursday, January 01, 2026
0 Comments