Ad Code

ಕನ್ನಡ ವರ್ಣಮಾಲೆ


  • ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು - 49.
  • ಕನ್ನಡ ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದ್ದು ಅವು - ಸ್ವರಾಕ್ಷರಗಳು, ವ್ಯಂಜನಾಕ್ಷರಗಳು ಮತ್ತು ಯೋಗವಾಹಗಳು.
  • ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳ ಸಂಖ್ಯೆ - 13.
  • ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಾಕ್ಷರಗಳ ಸಂಖ್ಯೆ - 34.
  • ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ - 02.
  • ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳಲ್ಲಿ ಎರಡು ವಿಧಗಳಿವೆ. ಅವು - ಹ್ರಸ್ವಸ್ವರಗಳು ಮತ್ತು ದೀರ್ಘಸ್ವರಗಳು.
  • ಕನ್ನಡ ವರ್ಣಮಾಲೆಯ ಯೋಗವಾಹಗಳಲ್ಲಿರುವ ಎರಡು ವಿಧಗಳು - ಅನುಸ್ವಾರ ಮತ್ತು ವಿಸರ್ಗ.
  • ಕನ್ನಡ ವರ್ಣಮಾಲೆಯ ವ್ಯಂಜನಗಳಲ್ಲಿರುವ ಎರಡು ವಿಧಗಳು - ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ.
  • ವರ್ಗೀಯ ವ್ಯಂಜನಗಳಲ್ಲಿ ಮೂರು ಗುಂಪುಗಳಿವೆ. ಅವು - ಅಲ್ಪ ಪ್ರಾಣಾಕ್ಷರಗಳು, ಮಹಾಪ್ರಾಣಾಕ್ಷರಗಳು ಮತ್ತು ಅನುನಾಸಿಕ ಅಕ್ಷರಗಳು.
  • ಅಲ್ಪ ಪ್ರಾಣಾಕ್ಷರಗಳು ಎಂದರೆ - ಕಡಿಮೆ ಪ್ರಾಣ (ಉಸಿರು) ದಿಂದ ಉಚ್ಚರಿಸಲ್ಪಡುವ ಅಕ್ಷರಗಳು.
  • ಮಹಾಪ್ರಾಣಾಕ್ಷರಗಳು ಎಂದರೆ - ಹೆಚ್ಚು ಪ್ರಾಣದಿಂದ ಉಚ್ಚರಿಸಲ್ಪಡುವ ಅಕ್ಷರಗಳು.
  • ಅನುನಾಸಿಕ ಅಕ್ಷರಗಳು ಎಂದರೆ - ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು.
  • ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ - ಆರು.
  • ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘಸ್ವರಗಳ ಸಂಖ್ಯೆ - ಏಳು.
  • ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ - 25.
  • ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ - 09.
  • ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ - ಹತ್ತು.
  • ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ - ಹತ್ತು.
  • ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ - ಐದು.
  • ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳು - ಗುಣಿತಾಕ್ಷರಗಳು.
  • ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳು - ಸ್ವರಗಳು.
  • ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರ ಮಾಡಲಾಗುವ ಅಕ್ಷರಗಳು - ವ್ಯಂಜನಗಳು.
  • ಸ್ವರಗಳ ಮುಂದೆ ಬರೆದು ಉಚ್ಚಾರ ಮಾಡಲಾಗುವ ಅನುಸ್ವಾರ ಮತ್ತು ವಿಸರ್ಗಗಳಿಗೆ ಹೀಗೆಂದು ಹೆಸರು - ಯೋಗವಾಹಗಳು.
  • ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳು - ಹ್ರಸ್ವಸ್ವರಗಳು.
  • ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳು - ದೀರ್ಘಸ್ವರಗಳು.
  • ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳು - ಪ್ಲುತಸ್ವರಗಳು.
  • ಕನ್ನಡ ವರ್ಣಮಾಲೆಯಲ್ಲಿರುವ ಆರು ಹ್ರಸ್ವಸ್ವರಗಳು - ಅ, ಇ, ಉ, ಋ, ಎ ಮತ್ತು ಒ.
  • ಕನ್ನಡ ವರ್ಣಮಾಲೆಯಲ್ಲಿರುವ ಏಳು ದೀರ್ಘಸ್ವರಗಳು - ಆ, ಈ, ಊ, ಏ, ಐ, ಓ ಮತ್ತು ಔ.
  • ವ್ಯಂಜನಕ್ಕೆ ವ್ಯಂಜನ ದ್ವಿತ್ವವಾಗಿ ಸೇರಿಕೊಂಡು ಉಂಟಾಗುವ ಅಕ್ಷರಗಳು - ಒತ್ತಕ್ಷರಗಳು ಅಥವಾ ಸಂಯುಕ್ತಾಕ್ಷರಗಳು ಅಥವಾ ದ್ವಿತ್ವಾಕ್ಷರಗಳು.
  • ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರಗಳು - ಸಜಾತೀಯ ಸಂಯುಕ್ತಾಕ್ಷರಗಳು.
  • ಬೇರೆ ಬೇರೆ ಜಾತಿಯ ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಗಳು - ವಿಜಾತೀಯ ಸಂಯುಕ್ತಾಕ್ಷರಗಳು.
  • ವರ್ಗೀಯ ವ್ಯಂಜನಗಳ ಕವರ್ಗದ ಅಕ್ಷರಗಳು ಹುಟ್ಟುವುದು - ಕಂಠಭಾಗದಲ್ಲಿ.
  • ವರ್ಗೀಯ ವ್ಯಂಜನಗಳ ಚವರ್ಗದ ಅಕ್ಷರಗಳು ಹುಟ್ಟುವುದು - ತಾಲುವಿನ (ದವಡೆಯ) ಸಹಾಯದಿಂದ.
  • ವರ್ಗೀಯ ವ್ಯಂಜನಗಳ ಟವರ್ಗದ ಅಕ್ಷರಗಳು ಹುಟ್ಟುವುದು - ಮೂರ್ಧಭಾಗದಲ್ಲಿ.
  • ವರ್ಗೀಯ ವ್ಯಂಜನಗಳ ತವರ್ಗದ ಅಕ್ಷರಗಳು ಹುಟ್ಟುವುದು - ಹಲ್ಲುಗಳ ಸಹಾಯದಿಂದ.
  • ವರ್ಗೀಯ ವ್ಯಂಜನಗಳ ಪವರ್ಗದ ಅಕ್ಷರಗಳು ಹುಟ್ಟುವುದು - ತುಟಿಗಳ ಸಹಾಯದಿಂದ.
  • ಕಂಠದಲ್ಲಿ ಹುಟ್ಟುವ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ - ಕಂಠ್ಯಕ್ಷರಗಳು.
  • ಕಂಠದಲ್ಲಿ ಹುಟ್ಟುವ ಅಕ್ಷರಗಳು ಇವು - ಅ, ಆ, ಕ, ಖ, ಗ, ಘ, ಹ ಮತ್ತು ವಿಸರ್ಗ (ಅಃ)
  • ತಾಲುವಿನ (ದವಡೆಯ) ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ - ತಾಲವ್ಯಕ್ಷರಗಳು.
  • ಈ ಅಕ್ಷರಗಳು ತಾಲುವಿನ ಸಹಾಯದಿಂದ ಹುಟ್ಟುತ್ತವೆ - ಇ, ಈ, ಚ, ಛ, ಜ, ಝ, ಞ, ಯ ಮತ್ತು ಶ.
  • ನಾಲಿಗೆಯ ಮೇಲ್ಭಾಗದಲ್ಲಿರುವ ಮೂರ್ಧವೆಂಬುದರ ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ - ಮೂರ್ಧನ್ಯಕ್ಷರಗಳು. 
  • ಮೂರ್ಧದ ಸಹಾಯದಿಂದ ಹುಟ್ಟುವ ಅಕ್ಷರಗಳು ಇವು - ಋ, ಟ, ಠ, ಡ, ಢ, ಣ, ರ ಮತ್ತು ಷ.
  • ದಂತ (ಹಲ್ಲುಗಳ) ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ - ದಂತ್ಯಕ್ಷರಗಳು.
  • ದಂತದ ಸಹಾಯದಿಂದ ಹುಟ್ಟುವ ಅಕ್ಷರಗಳು ಹೀಗಿವೆ - ತ, ಥ, ದ, ಧ, ನ, ಲ ಮತ್ತು ಸ.
  • ಓಷ್ಠದ (ತುಟಿಯ) ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ - ಓಷ್ಠ್ಯಕ್ಷರಗಳು.
  • ತುಟಿಯ ಸಹಾಯದಿಂದ ಹುಟ್ಟುವ ಅಕ್ಷರಗಳು ಹೀಗಿವೆ - ಉ, ಊ, ಪ, ಫ, ಬ, ಭ ಮತ್ತು ಮ.
  • ನಾಸಿಕದ ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಹೀಗೆಂದು ಕರೆಯುವರು - ಅನುನಾಸಿಕಾಕ್ಷರಗಳು.
  • ನಾಸಿಕದ ಸಹಾಯದಿಂದ ಈ ಅಕ್ಷರಗಳು ಹುಟ್ಟುತ್ತವೆ - ಙ, ಞ, ಣ, ನ ಮತ್ತು ಮ.
  • ಕಂಠ ಮತ್ತು ತಾಲುಗಳೆರಡರ ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಹೀಗೆ ಕರೆಯುವರು - ಕಂಠತಾಲು ಅಕ್ಷರಗಳು.
  • ಈ ಅಕ್ಷರಗಳು ಕಂಠತಾಲುಅಕ್ಷರಗಳಾಗಿವೆ - ಎ, ಏ, ಐ.
  • ಕಂಠ ಮತ್ತು ತುಟಿಗಳೆರಡರ ಸಹಾಯದಿಂದ ಹುಟ್ಟುವ ಅಕ್ಷರಗಳಿಗೆ ಹೀಗೆಂದು ಹೆಸರು - ಕಂಠೋಷ್ಠ್ಯ ಅಕ್ಷರಗಳು.
  • ಈ ಅಕ್ಷರಗಳು ಕಂಠೋಷ್ಠ್ಯ ಅಕ್ಷರಗಳಾಗಿವೆ - ಒ, ಓ ಮತ್ತು ಔ.
  • ಹಲ್ಲು ಮತ್ತು ತುಟಿಗಳ ಸಹಾಯದಿಂದ ಹುಟ್ಟುವ ದಂತೋಷ್ಠ್ಯ ಅಕ್ಷರ ಇದು - ವ.
  • ಕಂಠ ಮತ್ತು ನಾಸಿಕದ ಸಹಾಯದಿಂದ ಹುಟ್ಟುವ ಕಂಠನಾಸಿಕಾಕ್ಷರ ಇದು - ಅನುಸ್ವಾರ (ಅಂ)

Post a Comment

0 Comments

Close Menu