ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬರೆಯಬೇಕಾದ ಚಿಹ್ನೆ - ಪೂರ್ಣವಿರಾಮ (.)
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ, ಉಪವಾಕ್ಯಗಳು ಮುಗಿದಲ್ಲೆಲ್ಲ ಈ ಚಿಹ್ನೆಯನ್ನು ಉಪಯೋಗಿಸಬೇಕು - ಅರ್ಧವಿರಾಮ (;)
ಸಂಬೋಧನೆಯ ಮುಂದೆ, ಅನೇಕ ಬೇರೆ ಬೇರೆ ವಿಶೇಷಣಗಳು ಕರ್ತೃಪದಕ್ಕಾಗಿ, ಕರ್ಮಪದಕ್ಕಾಗಿ, ಕ್ರಿಯಾಪದಕ್ಕಾಗಿ ವಿಶೇಷಣಗಳಾಗಿದ್ದಾಗ ಕೊನೆಯದನ್ನು ಬಿಟ್ಟು ಉಳಿದವುಗಳ ಮುಂದೆ ಈ ಚಿಹ್ನೆ ಬರೆಯಬೇಕು - ಅಲ್ಪ ವಿರಾಮ (,)
ಪ್ರಶ್ನಾರ್ಥಕ ಪದ ಮತ್ತು ವಾಕ್ಯಗಳ ಮುಂದೆ ಈ ಚಿಹ್ನೆಯನ್ನು ಬರೆಯಬೇಕು - ಪ್ರಶ್ನಾರ್ಥಕ ಚಿಹ್ನೆ (?)
ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ, ಕೋಪ, ಆನಂದ, ಇತ್ಯಾದಿ ಭಾವನೆ ವ್ಯಕ್ತಪಡಿಸುವ ಶಬ್ದಗಳ ಮುಂದೆ ಈ ಚಿಹ್ನೆ ಬರೆಯಬೇಕು - ಭಾವಸೂಚಕ ಚಿಹ್ನೆ (!)
ಇನ್ನೊಬ್ಬರ ನೇರ ಮಾತುಗಳನ್ನು ತೋರಿಸುವಾಗ ಈ ಚಿಹ್ನೆಯನ್ನು ಉಪಯೋಗಿಸಬೇಕು - ಉದ್ಧರಣ ಚಿಹ್ನೆ ಅಥವಾ ವಾಕ್ಯವೇಷ್ಟನ ಚಿಹ್ನೆ (" ")
ಒಂದು ಶಬ್ದವನ್ನೋ ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಶಬ್ದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಉಪಯೋಗಿಸಬೇಕು - ಆವರಣ ಚಿಹ್ನೆ (())
ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ ಎಂದು ತೋರಿಸುವಾಗ ಸಾಮಾನ್ಯವಾಗಿ ಈ ಚಿಹ್ನೆಯನ್ನು ಉಪಯೋಗಿಸಬೇಕು - ವಿವರಣಾತ್ಮಕ ಚಿಹ್ನೆ (:)
ಎರಡು ಪದಗಳನ್ನೋ, ಪ್ರಕೃತಿ ಪ್ರತ್ಯಯಗಳನ್ನೋ, ಕೂಡಿಸಿ ಸಂಧಿ ಮಾಡಿ ಹೇಳುವಾಗ, ಎರಡು ಪದಗಳನ್ನು ಕೂಡಿಸಿ ಸಮಾಸ ಮಾಡುವಾಗ ಸಾಮಾನ್ಯವಾಗಿ ಈ ಚಿಹ್ನೆಯನ್ನು ಬಳಸುತ್ತೇವೆ - ಅಧಿಕ ಚಿಹ್ನೆ (+)
ಎರಡು ಪದಗಳ ಅರ್ಥ ಸಮಾನವೆನ್ನವಾಗ, ಇವೆರಡು ಸೇರಿ ಇದಕ್ಕೆ ಸಮಾನವೆನ್ನವಾಗ ಸಾಮಾನ್ಯವಾಗಿ ಈ ಚಿಹ್ನೆಯನ್ನು ಉಪಯೋಗಿಸುತ್ತೇವೆ - ಸಮಾನಾರ್ಥಕ ಚಿಹ್ನೆ (=)
0 Comments