ಸಮಾಸಗಳ ಪಟ್ಟಿ 8
| ಪದಗಳು | ವಿಗ್ರಹ ವಾಕ್ಯ | ಸಮಾಸ |
| ಕೆಂಗಣ್ಣ | ಕೆಂಪು ಕಣ್ಣು ಉಳ್ಳವ | ಬಹುಬ್ರೀಹಿ ಸಮಾಸ |
| ಡೊಂಕುಗಾಲ | ಡೊಂಕು ಕಾಲು ಉಳ್ಳವ | ಬಹುಬ್ರೀಹಿ ಸಮಾಸ |
| ಕಡುಚಾಗಿ | ಕಡಿದಾದ ಚಾಗ ಉಳ್ಳವ | ಬಹುಬ್ರೀಹಿ ಸಮಾಸ |
| ಹಣೆಗಣ್ಣ | ಹಣೆಯಲ್ಲಿ ಕಣ್ಣು ಉಳ್ಳವ | ಬಹುಬ್ರೀಹಿ ಸಮಾಸ |
| ಕಿಚ್ಚುಗಣ್ಣ | ಕಿಚ್ಚು ಕಣ್ಣಿನಲ್ಲಿ ಉಳ್ಳವ | ಬಹುಬ್ರೀಹಿ ಸಮಾಸ |
| ಕೊಂಕುಬಿಲ್ಲ | ಕೊಂಕಿದುದು ಬಿಲ್ ಆವಂಗೋ | ಬಹುಬ್ರೀಹಿ ಸಮಾಸ |
| ಅಲರ್ಗೆಹೆಯ | ಅಲರ್ಗಳ್ ಕೆಹಗಳ್ ಆವಂಗೋ | ಬಹುಬ್ರೀಹಿ ಸಮಾಸ |
| ಬಗ್ಗದೊವಲುಡೆಯಂ | ಬಗ್ಗದ ತೊವಲು ಉಡುಗೆ ಆವಂಗೋ | ಬಹುಬ್ರೀಹಿ ಸಮಾಸ |
| ಮೀಂಗುಲಿ | ಮೀನನ್ನು ಕೊಲ್ಲುವವ | ಬಹುಬ್ರೀಹಿ ಸಮಾಸ |
| ಹಲ್ಲಿಲಿ | ಹಲ್ಲು ಇಲ್ಲದುದು | ಬಹುಬ್ರೀಹಿ ಸಮಾಸ |
| ಕರ್ಬುವಿಲ್ಲ | ಕರ್ಬನ್ನು ಬಿಲ್ಲಾಗಿ ಉಳ್ಳವ | ಬಹುಬ್ರೀಹಿ ಸಮಾಸ |
| ಚಕ್ರಪಾಣಿ | ಚಕ್ರವನ್ನು ಪಾಣಿಯಲ್ಲಿ ಉಳ್ಳವನು | ಬಹುಬ್ರೀಹಿ ಸಮಾಸ |
| ಫಾಲನೇತ್ರ | ಫಾಲದಲ್ಲಿ ನೇತ್ರವನ್ನು ಉಳ್ಳವನು | ಬಹುಬ್ರೀಹಿ ಸಮಾಸ |
| ಇಕ್ಷುಕೋದಂಡ | ಇಕ್ಷುವನ್ನು ಕೋದಂಡವಾಗಿ ಉಳ್ಳವನು | ಬಹುಬ್ರೀಹಿ ಸಮಾಸ |
| ಹಣಾಹಣಿ | ಹಣೆಯುವುದರಿಂದ ಹಣೆಯುವುದರಿಂದ ಆದ ಯುದ್ಧ | ಬಹುಬ್ರೀಹಿ ಸಮಾಸ |
| ಕೋಲಾಕೋಲಿ | ಕೋಲಿನಿಂದ ಕೋಲಿನಿಂದ ಮಾಡಿದ ಜಗಳ | ಬಹುಬ್ರೀಹಿ ಸಮಾಸ |
| ಬಿಡ್ನಾ ಬಿಡ್ನಿ | ಬಿಡ್ನದಿಂದ ಬಿಡ್ನದಿಂದ ಮಾಡಿದ ಜಗಳ | ಬಹುಬ್ರೀಹಿ ಸಮಾಸ |
| | |
| ಮೈದಡವಿ | ಮೈಯನ್ನು + ತಡವಿ | ಕ್ರಿಯಾ ಸಮಾಸ |
| ಕೈಮುಟ್ಟಿ | ಕೈಯನ್ನು + ಮುಟ್ಟಿ | ಕ್ರಿಯಾ ಸಮಾಸ |
| ಎವೆಯೆೞ್ಬಂ | ಎನಂ + ಪೇೞ್ಬಂ | ಕ್ರಿಯಾ ಸಮಾಸ |
| ಎಗೆಯ್ದಂ | ಎನಂ + ಗೆಯ್ದಂ | ಕ್ರಿಯಾ ಸಮಾಸ |
| ಎವೋದಂ | ಎತರ್ಕೆ + ಪೋದಂ | ಕ್ರಿಯಾ ಸಮಾಸ |
| ಎವಂದಂ | ಎತರ್ಕೆ + ಬಂದಂ | ಕ್ರಿಯಾ ಸಮಾಸ |
| ನೀರ್ಕುಡಿ | ನೀರಂ + ಕುಡಿ | ಕ್ರಿಯಾ ಸಮಾಸ |
| ಬಳೆದೊಟ್ಟಂ | ಬಳೆಯಂ + ತೊಟ್ಟಂ | ಕ್ರಿಯಾ ಸಮಾಸ |
| ಕೆಳೆಗೊಟ್ಟಂ | ಕೆಳೆಯಂ + ಕೊಟ್ಟಂ | ಕ್ರಿಯಾ ಸಮಾಸ |
| ಮರೆವೊಕ್ಕಂ | ಮರೆಯಂ + ಪೊಕ್ಕಂ | ಕ್ರಿಯಾ ಸಮಾಸ |
| ಪ್ರಿಯಂನುಡಿ | ಪ್ರಿಯಮಂ + ನುಡಿ | ಕ್ರಿಯಾ ಸಮಾಸ |
| ರಂಗಂಬೊಕ್ಕಂ | ರಂಗಮಂ + ಪೊಕ್ಕಂ | ಕ್ರಿಯಾ ಸಮಾಸ |
| ಕಡಂಗೊಂಡಂ | ಕಡಮಂ + ಕೊಂಡಂ | ಕ್ರಿಯಾ ಸಮಾಸ |
| ಬಳಪಂಗೊಳಲ್ | ಬಳಪಮಂ + ಕೊಳಲ್ | ಕ್ರಿಯಾ ಸಮಾಸ |
These below are Trending in Krishicode Website !!!!
Thursday, January 01, 2026
0 Comments