ಕಲಬುರಗಿ ಜಿಲ್ಲೆ ಮಾಹಿತಿ
- ಇಲ್ಲಿ ಸನ್ನತಿ ಎಂಬ ಸ್ಥಳ ಇದೆ.
- ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ.
- ಸನ್ನತಿಯಲ್ಲಿ ಬೌದ್ಧರ ಸ್ಮಾರಕಗಳು ಇವೆ.
- ಸನ್ನತಿಯಲ್ಲಿ ಮೌರ್ಯ ಅರಸ ಅಶೋಕನ ಶಾಸನಗಳಿವೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ಸುಣ್ಣದ ಕಲ್ಲಿನ ನಿಕ್ಷೇಪವನ್ನು ಹೊಂದಿದೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.
- ಚಿಂಚೋಳ್ಳಿಯಲ್ಲಿ ಹೊಸ ಭೂಕಂಪನ ಮಾಪನಾ ಕೇಂದ್ರ ಸ್ಥಾಪಿಸಲಾಗಿದೆ.
- ಇದು ಅತೀ ಹೆಚ್ಚು ಬೀಳು ಭೂಮಿ ಹೊಂದಿದ ಜಿಲ್ಲೆ.
- ರಾಷ್ಟ್ರಕೂಟರ ರಾಜಧಾನಿ ಮಳಖೇಡ ಅಥವಾ ಮಾನ್ಯಖೇಟ ಕಲಬುರಗಿ ಜಿಲ್ಲೆಯಲ್ಲಿದೆ.
- ಜಾಮೀ ಮಸೀದಿ ದಕ್ಷಿಣ ಭಾರತದ ಎರಡನೇ ಅತೀ ದೊಡ್ಡ ಮಸೀದಿ ಹಾಗೂ ಕರ್ನಾಟಕದ ದೊಡ್ಡ ಮಸೀದಿಯಾಗಿದೆ.
- ಹೈಕೋರ್ಟ್ನ ಸಂಚಾರಿ ಪೀಠವನ್ನು 2008 ಜುಲೈ 5 ರಂದು ಸ್ಥಾಪಿಸಲಾಗಿದೆ.
- ಕರ್ನಾಟಕದಲ್ಲಿ ಮೊದಲ ದೂರದರ್ಶನ ಬಂದಿದ್ದು ಕಲಬುರಗಿ ಜಿಲ್ಲೆಯಲ್ಲಿ.
- ಬೆಣ್ಣೆತೊರಾ ನಾಲಾ ಯೋಜನೆ ಇದೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆ ಬೆಳೆಯುವ ಜಿಲ್ಲೆಯಾಗಿದೆ. ಇಲ್ಲಿ ತೊಗರಿ ಬೆಳೆ ನಿಗಮ ಕೇಂದ್ರ ಕಛೇರಿ ಸ್ಥಾಪಿಸಲಾಗಿದೆ.
- ಕರ್ನಾಟಕದಲ್ಲಿ ಪ್ರತಿ ಕುಟುಂಬ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆಯಾಗಿದೆ.
- ಇಲ್ಲಿ ಖ್ವಾಜಾ ಬಂದೇನವಾಜ್ ದರ್ಗಾ ಇದೆ.
- ಕರ್ನಾಟಕದ 2ನೇ ಅತೀದೊಡ್ಡ ಜಿಲ್ಲೆಯಾಗಿದೆ (ವಿಸ್ತೀರ್ಣದಲ್ಲಿ).
- ಬಹುಮನಿ ಸುಲ್ತಾನರ ಮೊದಲ ರಾಜಧಾನಿ ಆಗಿತ್ತು.
- ಇಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಇದೆ.
- ಇಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ (CENTRAL UNIVERSITY OF KARNATAKA) ಇದ್ದು ಇದನ್ನು 2009ರಲ್ಲಿ ಸ್ಥಾಪಿಸಲಾಗಿದೆ.
- ಇತ್ತೀಚೆಗೆ ಇಲ್ಲಿ ವಾಯುಯಾನವನ್ನು ಉದ್ಘಾಟಿಸಲಾಯಿತು.
- 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಧ್ಯಕ್ಷರು ಹೆಚ್.ಎಸ್. ವೆಂಕಟೇಶಮೂರ್ತಿ.
These below are Trending in Krishicode Website !!!!
Thursday, January 01, 2026
0 Comments