Ad Code

ಬಾಗಲಕೋಟೆ ಜಿಲ್ಲೆ ಮಾಹಿತಿ


  • ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು.
  • ಈ ಜಿಲ್ಲೆಯವರಾದ ಬಿ.ಡಿ. ಜತ್ತಿರವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು. ಮತ್ತು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ.
  • ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
  • ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿಯ ಹಳೆಯ ಹೆಸರು ವಾತಾಪಿ.
  • ಬಾದಾಮಿಯಲ್ಲಿರುವ ಪ್ರಸಿದ್ಧ ಗುಹಾಂತರ ದೇವಾಲಯವನ್ನು ಚಾಲುಕ್ಯರು ನಿರ್ಮಿಸಿದ್ದಾರೆ. ಬಾದಾಮಿಯು ನವಶಿಲಾಯುಗದ ತಾಣವಾಗಿದೆ.
  • ಬಾದಾಮಿಯಲ್ಲಿರುವ ಕಪ್ಪೆ ಅರಭಟ್ಟನ ಶಾಸನವು ತ್ರಿಪದಿಯಲ್ಲಿದೆ.
  • ಇಲ್ಲಿ ಚಾಲುಕ್ಯ ಉತ್ಸವ ನಡೆಯುತ್ತದೆ.
  • ಕೂಡಲ ಸಂಗಮವು ಕೃಷ್ಣಾ ಮತ್ತು ಮಲಪ್ರಭಾ ನದಿಗಳ ದಂಡೆಯ ಮೇಲಿದೆ.
  • ಐಹೊಳೆ ದೇವಾಲಯವು ಭಾರತದ ಸಂಸತ್ತಿನ ಆಕಾರವನ್ನು ಹೊಂದಿದೆ. ಇದನ್ನು ದೇವಾಲಯಗಳ ತೊಟ್ಟಿಲು ಎಂದು ಕರೆಯುವರು.
  • ಯಡಹಳ್ಳಿ ಎಂಬ ಪ್ರದೇಶವು ಚಿಂಕಾರ ಜಿಂಕೆಗಳಿಗೆ ಪ್ರಸಿದ್ಧಿಯಾಗಿದೆ.
  • ಈ ಜಿಲ್ಲೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಇದೆ.
  • ಹುನಗುಂದ ತಾಲೂಕಿನ ಐಹೊಳೆ ಗ್ರಾಮದ ಮೇಗುತಿ ದೇವಾಲಯದಲ್ಲಿ ಐಹೊಳೆ ಶಾಸನ ಇದೆ. ಈ ಶಾಸನವನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದ ಕವಿ ರವಿಕೀರ್ತಿ ರಚಿಸಿದ. ಐಹೊಳೆ ಶಾಸನವು ನರ್ಮದಾ ನದಿ ಕದನಕ್ಕೆ ಸಂಬಂಧಿಸಿದೆ.
  • ಐಹೊಳೆ ಶಾಸನದಲ್ಲಿ ಕಾಳಿದಾಸನ ಹೆಸರನ್ನು ಉಲ್ಲೇಖಿಸಲಾಗಿದೆ.
  • ಐಹೊಳೆ ಶಾಸನವು ಸಂಸ್ಕೃತ ಭಾಷೆಯಲ್ಲಿದೆ.
  • ಇಲಕಲ್ ಪಿಂಕ್ ಕಲ್ಲಿನ ಗ್ರಾನೈಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ.
  • ಮುಧೋಳ ತಾಲೂಕಿನಲ್ಲಿ ಹಲಗಲಿ ಎನ್ನುವ ಊರು ಇದೆ.
  • ಇಲ್ಲಿ ಬೇಡರ ದಂಗೆಯು 1857 ರಲ್ಲಿ ನಡೆಯಿತು. ಈ ದಂಗೆಯು ಸಶಸ್ತ್ರ ದಂಗೆಯಾಗಿದೆ.
  • ಮುಧೋಳ ಹುಂಡ್ಸ್ ಎಂಬ ನಾಯಿ ತಳಿಗೆ ಹೆಸರುವಾಸಿಯಾಗಿದೆ.
  • ಮುಧೋಳದಲ್ಲಿ ರನ್ನ ಉತ್ಸವ ನಡೆಯುತ್ತದೆ.
  • ಇಲ್ಲಿ ಐಹೊಳೆ, ಬಾದಾಮಿ, ಪಟ್ಟದಕಲ್ಲು ಎಂಬ ಊರುಗಳಿವೆ.
  • ಪಟ್ಟದಕಲ್ಲು 1987 ರಲ್ಲಿ ವಿಶ್ವ ಪಾರಂಪರೆ ಪಟ್ಟಿಗೆ ಸೇರಿದೆ.


Post a Comment

0 Comments

Close Menu