Ad Code

ಕಲಬುರಗಿ ಜಿಲ್ಲೆ ಮಾಹಿತಿ


  • ಇಲ್ಲಿ ಸನ್ನತಿ ಎಂಬ ಸ್ಥಳ ಇದೆ.
  • ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ.
  • ಸನ್ನತಿಯಲ್ಲಿ ಬೌದ್ಧರ ಸ್ಮಾರಕಗಳು ಇವೆ.
  • ಸನ್ನತಿಯಲ್ಲಿ ಮೌರ್ಯ ಅರಸ ಅಶೋಕನ ಶಾಸನಗಳಿವೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಸುಣ್ಣದ ಕಲ್ಲಿನ ನಿಕ್ಷೇಪವನ್ನು ಹೊಂದಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.
  • ಚಿಂಚೋಳ್ಳಿಯಲ್ಲಿ ಹೊಸ ಭೂಕಂಪನ ಮಾಪನಾ ಕೇಂದ್ರ ಸ್ಥಾಪಿಸಲಾಗಿದೆ.
  • ಇದು ಅತೀ ಹೆಚ್ಚು ಬೀಳು ಭೂಮಿ ಹೊಂದಿದ ಜಿಲ್ಲೆ.
  • ರಾಷ್ಟ್ರಕೂಟರ ರಾಜಧಾನಿ ಮಳಖೇಡ ಅಥವಾ ಮಾನ್ಯಖೇಟ ಕಲಬುರಗಿ ಜಿಲ್ಲೆಯಲ್ಲಿದೆ.
  • ಜಾಮೀ ಮಸೀದಿ ದಕ್ಷಿಣ ಭಾರತದ ಎರಡನೇ ಅತೀ ದೊಡ್ಡ ಮಸೀದಿ ಹಾಗೂ ಕರ್ನಾಟಕದ ದೊಡ್ಡ ಮಸೀದಿಯಾಗಿದೆ.
  • ಹೈಕೋರ್ಟ್‌ನ ಸಂಚಾರಿ ಪೀಠವನ್ನು 2008 ಜುಲೈ 5 ರಂದು ಸ್ಥಾಪಿಸಲಾಗಿದೆ.
  • ಕರ್ನಾಟಕದಲ್ಲಿ ಮೊದಲ ದೂರದರ್ಶನ ಬಂದಿದ್ದು ಕಲಬುರಗಿ ಜಿಲ್ಲೆಯಲ್ಲಿ.
  • ಬೆಣ್ಣೆತೊರಾ ನಾಲಾ ಯೋಜನೆ ಇದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆ ಬೆಳೆಯುವ ಜಿಲ್ಲೆಯಾಗಿದೆ. ಇಲ್ಲಿ ತೊಗರಿ ಬೆಳೆ ನಿಗಮ ಕೇಂದ್ರ ಕಛೇರಿ ಸ್ಥಾಪಿಸಲಾಗಿದೆ.
  • ಕರ್ನಾಟಕದಲ್ಲಿ ಪ್ರತಿ ಕುಟುಂಬ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆಯಾಗಿದೆ.
  • ಇಲ್ಲಿ ಖ್ವಾಜಾ ಬಂದೇನವಾಜ್ ದರ್ಗಾ ಇದೆ.
  • ಕರ್ನಾಟಕದ 2ನೇ ಅತೀದೊಡ್ಡ ಜಿಲ್ಲೆಯಾಗಿದೆ (ವಿಸ್ತೀರ್ಣದಲ್ಲಿ).
  • ಬಹುಮನಿ ಸುಲ್ತಾನರ ಮೊದಲ ರಾಜಧಾನಿ ಆಗಿತ್ತು.
  • ಇಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಇದೆ.
  • ಇಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ (CENTRAL UNIVERSITY OF KARNATAKA) ಇದ್ದು ಇದನ್ನು 2009ರಲ್ಲಿ ಸ್ಥಾಪಿಸಲಾಗಿದೆ.
  • ಇತ್ತೀಚೆಗೆ ಇಲ್ಲಿ ವಾಯುಯಾನವನ್ನು ಉದ್ಘಾಟಿಸಲಾಯಿತು.
  • 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಧ್ಯಕ್ಷರು ಹೆಚ್.ಎಸ್. ವೆಂಕಟೇಶಮೂರ್ತಿ.

Post a Comment

0 Comments

Close Menu