Question and Answers in Kannada Part - 66
| ಕ್ರ.ಸಂ | ಪ್ರಶ್ನೆ | ಉತ್ತರ |
| 1 | ಇತ್ತೀಚೆಗೆ ಮೈಸೂರು ಯದು ವಂಶದ 27ನೇ ಉತ್ತರಾಧಿಕಾರಿಯಾಗಿ ಯಾರನ್ನು ದತ್ತು ಪಡೆಯಲಾಯಿತು? | ಯದುವೀರ್ ಗೋಪಾಲ್ ರಾಜ್ ಅರಸ್ |
| 2 | ಇತ್ತೀಚೆಗೆ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸಿದ ಕರ್ನಾಟಕದ ಜಿಲ್ಲೆ ಯಾವುದು? | ಮಂಡ್ಯ |
| 3 | ಲೇಸರ್ (LASER) ನ ವಿಸ್ತೃತ ರೂಪವೇನು? | ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ |
| 4 | ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ? | ಶಿವನ ಸಮುದ್ರ |
| 5 | ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ಯಾವುದು? | ಬರ್ಡ್‌ಮ್ಯಾನ್ |
| 6 | ಸುಜನ ಇದು ಯಾರ ಕಾವ್ಯ ನಾಮವಾಗಿದೆ? | ಎಸ್.ಜೆ.ನಾರಾಯಣ ಶೆಟ್ಟಿ |
| 7 | ಏಕಕೋಶ ಜೀವಿಗಳ ಚಲನೆಗೆ ಸಹಾಯಕವಾಗುವ ಅಂಗಗಳು ಯಾವುವು? | ಮಿಥ್ಯಪಾದ, ಲೋಮಾಂಗ, ಕಶಾಂಗ |
| 8 | ಶಬ್ದಗಾರುಡಿಗ ಎಂದು ಬಿರುದು ಹೊಂದಿದ ಕವಿ ಯಾರು? | ದತ್ತಾತ್ರೇಯ ರಾಮಚಂದ್ರ ಬೇಂದ್ರೆ |
| 9 | ರನ್ನ ವೈಭವ ಇತ್ತೀಚೆಗೆ ಯಾವ ಜಿಲ್ಲೆಯಲ್ಲಿ ನಡೆಯಿತು? | ಬಾಗಲಕೋಟೆ (ಮುಧೋಳ) |
| 10 | ಮೈ ಮ್ಯೂಸಿಕ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು? | ಪಂಡಿತ ರವಿಶಂಕರ್ |
| 11 | ಶಾಖದ ಪ್ರಮಾಣವನ್ನು ಅಳೆಯುವ ಸಾಧನ ಯಾವುದು? | ಕ್ಯಾಲೋರಿ ಮೀಟರ್ |
| 12 | ಜ್ಞಾನಪೀಠ ಪುರಸ್ಕೃತ ಮಹಾದೇವಿ ವರ್ಮ ಯಾವ ಭಾಷೆಯ ಕವಯಿತ್ರಿ? | ಹಿಂದಿ |
| 13 | ಬೂದುಕ್ರಾಂತಿ ಇದು ಯಾವ ವಸ್ತುವಿನ ಉತ್ಪಾದನೆಗೆ ಸಂಬಂಧಿಸಿದೆ? | ಉಣ್ಣೆ ಉತ್ಪಾದನೆ |
| 14 | ಟಿ.ವಿ.ಯ ಮುಖ್ಯ ಅಂಗ ಯಾವುದು? | ಕ್ಯಾಥೋಡ್ ಕಿರಣಗಳ ಕೊಳವೆ |
| 15 | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇದ್ದ ಮೊದಲ ಹೆಸರು ಯಾವುದು? | ಇಂಪೀರಿಯಲ್ ಬ್ಯಾಂಕ್ |
| 16 | ಜ್ಯೋತಿಷ್ಯ ಶಾಸ್ತ್ರದಲ್ಲಿರುವ ರಾಶಿಗಳ ಸಂಖ್ಯೆ ಎಷ್ಟು? | 12 |
| 17 | 1894ರಲ್ಲಿ ಪ್ರಪಂಚದಲ್ಲೇ ಮೊದಲ ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು? | ಭಾರತ |
| 18 | ಮೊಘಲರ ಮಾತೃಭಾಷೆ ಯಾವುದಾಗಿತ್ತು? | ತುರ್ಕಿ |
| 19 | ಸಿಮೂಲಿಗೆಯ ಚೆನ್ನರಾಯ ಇದು ಯಾರ ಕಾವ್ಯನಾಮವಾಗಿದೆ? | ಚಂದಿಮರಸ |
| 20 | ಡಾ. ಅಬ್ದುಲ್ ಕಲಾಂ ಯಾವ ರಾಜ್ಯಕ್ಕೆ ಸೇರಿದವರು? | ತಮಿಳುನಾಡು |
| 21 | ಬಾಂಗ್ರಾ ಇದು ಯಾವ ರಾಜ್ಯದ ಜಾನಪದ ನೃತ್ಯ ಶೈಲಿಯಾಗಿದೆ? | ಪಂಜಾಬ್ |
| 22 | ಕಿರು ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು? | 42ನೇ ತಿದ್ದುಪಡಿ |
| 23 | ಸೀಮೆಸುಣ್ಣದ ರಾಸಾಯನಿಕ ಹೆಸರೇನು? | ಕ್ಯಾಲ್ಸಿಯಂ ಕಾರ್ಬೋನೇಟ್ |
| 24 | ಭಾರತ ದೇಶದ ಉದ್ಧಾರ ಸಣ್ಣ ಮತ್ತು ಗೃಹ ಕೈಗಾರಿಕೆಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯವೆಂದು ಹೇಳಿದವರು ಯಾರು? | ಮಹಾತ್ಮಗಾಂಧಿ |
| 25 | ಸ್ವಾತಂತ್ರ್ಯ ಭಾರತದ ಮೊದಲ ಶಿಕ್ಷಣ ಸಚಿವರು ಯಾರು? | ಮೌಲಾನಾ ಅಬ್ದುಲ್ ಕಲಾಮ್ ಆಜಾದ್ |
| 26 | ಜಾನ್ ಡೇವಿಡ್ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕನ್ನಡದ ಮೊದಲ ವಿಜ್ಞಾನಿ ಯಾರು? | ಸಿ.ಎನ್.ಆರ್.ರಾವ್ |
| 27 | ಒರಿಸ್ಸಾದ ಪುರಿಯಲ್ಲಿ ಗೋವರ್ಧನ ಮಠ ಸ್ಥಾಪಿಸಿದವರು ಯಾರು? | ಶಂಕರಾಚಾರ್ಯರು |
| 28 | ಇತ್ತೀಚೆಗೆ ವಿಶ್ವಕಪ್‌ನಲ್ಲಿ ಮೊದಲ ದ್ವಿಶತಕದ ದಾಖಲೆ ಮಾಡಿದ ಕ್ರಿಕೆಟ್ ಆಟಗಾರ ಯಾರು? | ಕ್ರಿಸ್ ಗೇಲ್ |
| 29 | ದಾದಾ ಸಾಹೇಬ್ ಫಾಲ್ಕೆಯವರ ಮೊದಲ ಹೆಸರೇನು? | ದುಂಡಿರಾಜ್ ಗೋವಿಂದ |
These below are Trending in Krishicode Website !!!!
Thursday, January 01, 2026
0 Comments