ಈ ತಳಿಯ ಮೂಲ ಸ್ಥಾನ ಗುಜರಾತ ರಾಜ್ಯದ ಮಾಹಿ ಮತ್ತು ಸಾಬರಮತಿ ನದಿಗಳ ನಡುವಿನ ಪ್ರದೇಶ, ಅದರಲ್ಲೂ ಕೈರಾ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಎಮ್ಮೆಗಳು ಮಧ್ಯಮ ಗಾತ್ರವಿದ್ದು, ಕೋಡುಗಳು ಕುಡುಗೋಲಾಕಾರದ ಅಥವಾ ಅರ್ಧ ಚಂದ್ರಾಕಾರದ್ದಾಗಿವೆ. ಹಣೆಯ ಮೇಲೆ, ಬಾಲದ ತುದಿ, ನಾಲ್ಕೂ ಕಾಲುಗಳ ಕೆಳ ಭಾಗ ಹಾಗೂ ಕೊರಳಿನ ಕೆಳಗೆ ಬಿಳಿ ಪಟ್ಟಿಗಳಿರುತ್ತವೆ. ಕಪ್ಪು ಅಥವಾ ಕಂದು ಬಣ್ಣದ ಕೂದಲುಗಳಿಂದ ಕೂಡಿದ ಚರ್ಮ ಹೊಂದಿರುವುದು. ಬೇಗನೆ ಪ್ರಾಪ್ತ ವಯಸ್ಸಿಗೆ ಬಂದು ನಿಯಮಿತವಾಗಿ ಬೆದೆಗೆ ಬರುವುದು ಹಾಗೂ ಗರ್ಭ ಧರಿಸುವುದು ಈ ತಳಿಯ ವಿಶೇಷತೆಯಾಗಿದೆ. ಒಂದು ಸೂಲದಲ್ಲಿ ಸರಾಸರಿ ಹಾಲು ಉತ್ಪಾದನೆ ೧೨೦೦-೧೫೦೦ ಕಿ. ಗ್ರಾಂ ಇದ್ದು, ಹಾಲಿನಲ್ಲಿ ಶೇ. ೭-೮ ರಷ್ಟು ಜಿಡ್ಡಿನಾಂಶವಿದೆ. ನಮ್ಮ ರಾಜ್ಯದಲ್ಲಿ ಈ ತಳಿಯು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.
Reference - Package of Practices, UAS Dharwad
0 Comments