ಈ ತಳಿಯ ಮೂಲ ಸ್ಥಾನ ಪಂಜಾಬ ಹಾಗೂ ಅದರ ಸುತ್ತಮುತ್ತಲಿನ ರಾಜ್ಯಗಳು. ಈ ಎಮ್ಮೆಗಳು ದೊಡ್ಡ ಗಾತ್ರದ ದೇಹ ಹೊಂದಿದ್ದು, ಕೋಡುಗಳು ತಲೆಯ ಮೇಲೆ ಮುಂದುಗಡೆ ಪೂರ್ತಿ ಸುತ್ತಿಕೊಂಡಿರುತ್ತವೆ. ಕಪ್ಪು ಬಣ್ಣದ ಚರ್ಮವನ್ನು ಹೊಂದಿರುತ್ತವೆ. ಈ ತಳಿ ಹಾಲು ಉತ್ಪಾದನೆಗೆ ಜಗತ್ತಿನಲ್ಲೇ ಶೇಷ್ಠ ಎಮ್ಮೆಯ ತಳಿಯಾಗಿದೆ. ದೇಹದ ಗಾತ್ರಕ್ಕೆ ತಕ್ಕಂತೆ ಈ ಎಮ್ಮೆಗಳಿಗೆ ಆಹಾರ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಸೂರ್ತಿ ತಳಿಗಿಂತ ನಿಧಾನವಾಗಿ ಬೆದೆಗೆ ಬಂದು ಗರ್ಭ ಧರಿಸುತ್ತವೆ. ಈ ತಳಿಯ ಎಮ್ಮೆಗಳು ಒಂದು ಸೂಲಿನಲ್ಲಿ ಸರಾಸರಿ ೧೮೦೦ ರಿಂದ ೨೦೦೦ ಕಿ. ಗ್ರಾಂ ಹಾಲನ್ನು ಕೊಡುತ್ತವೆ ಹಾಗೂ ಹಾಲಿನಲ್ಲಿ ಶೇ. ೬.೦-೬.೫ ರಷ್ಟು ಜಿಡ್ಡಿನಾಂಶವಿರುತ್ತದೆ.
Reference - Package of Practicaes , UAS Dharwad
0 Comments