ಹಾಲೆಂಡ್ ದೇಶದ ತಳಿಯಾದ ಈ ಹಸು ಪ್ರಪಂಚದಲ್ಲಿಯೇ ಅತೀ ಹೆಚ್ಚು ಹಾಲು ಕೊಡುವ ಸಾಮರ್ಥ್ಯ ಹೊಂದಿರುತ್ತದೆ. ಈ ತಳಿಯ ಹಸುಗಳು ದೊಡ್ಡ ಗಾತ್ರದ ದೇಹ ಹೊಂದಿದ್ದು, ಮೈ ಬಣ್ಣ ಕಪ್ಪು ಮತ್ತು ಬಿಳಿ ಪಟ್ಟಿಯಿಂದ ಕೂಡಿರುತ್ತದೆ. ಮುಖ ಉದ್ದವಾಗಿದ್ದು ನೇರವಾಗಿರುತ್ತದೆ. ಕೆಚ್ಚಲು ಬಹಳ ದೊಡ್ಡದಾಗಿದ್ದು, ಒಂದು ಸೂಲದಲ್ಲಿ ಸುಮಾರು ೫೦೦೦-೬೦೦೦ ಕಿ. ಗ್ರಾಂ ಹಾಲು ಕೊಡುವ ಸಾಮರ್ಥ್ಯ ಹೊಂದಿರುತ್ತವೆ. ಹಾಲಿನಲ್ಲಿ ಕೊಬ್ಬಿನಂಶ ಸರಾಸರಿ ಶೇ. ೩.೫ ೪.೦ ರಷ್ಟು ಇರುತ್ತದೆ. ಇಂಥ ಹಸುಗಳಿಂದ ಹೆಚ್ಚು ಹಾಲನ್ನು ಪಡೆಯಲು ಉತ್ತಮ ನಿರ್ವಹಣೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಸಮತೋಲನ ಆಹಾರವನ್ನು ಪೂರೈಸಬೇಕಾಗುವುದು.
Reference - Package of Practices, UAS Dharwad
0 Comments