ಕರುಗಳನ್ನು ಎರಡು ರೀತಿಯಲ್ಲಿ ಜೋಪಾನ ಮಾಡಬಹುದು.

೧. ಸಾಂಪ್ರದಾಯಿಕ ಪದ್ಧತಿ

೨. ಆಧುನಿಕ ಪದ್ಧತಿ

. ಸಾಂಪ್ರದಾಯಿಕ ಪದ್ಧತಿ

ತಾಯಿಯ ಮೊಲೆಹಾಲು ಕುಡಿಯಲು ಬಿಡುವದು ರೂಢಿಯಲ್ಲಿರುವ ಪದ್ಧತಿಯಾಗಿದೆ. ಈ ಪದ್ಧತಿಯನ್ನು ಅನುಸರಿಸಿದಾಗ ಕರುವಿಗೆ ಒಂದು ಮೊಲೆಯನ್ನು ಕುಡಿಯಲು ಬಿಡಬೇಕು. ಎರಡು ವಾರದ ಕರುವಿಗೆ ಅದರ ದಾಣಿಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನಿಸಬೇಕು. ಕರು ದಾಣಿಮಿಶ್ರಣ ತಿನ್ನಲು ಪ್ರಾರಂಭಿಸಿದ ಮೇಲೆ ಪ್ರತಿವಾರವೂ ಸುಮಾರು ೫೦ ರಿಂದ ೧೦೦ ಗ್ರಾಂ ದಾಣಿ ಮಿಶ್ರಣವನ್ನು ಹೆಚ್ಚಿಸಬೇಕು. ಇದರ ಜೊತೆಗೆ ಉತ್ತಮವಾದ ಹಸಿರು ಅಥವಾ ಒಣಮೇವು ಕೊಡಬೇಕು. ಕರುವಿಗೆ ಮೂರು ತಿಂಗಳ ವಯಸ್ಸಾದ ಮೇಲೆ ಕೇವಲ ತೊರೆ ಬಿಡಿಸಲು ಕರುವನ್ನು ಬಿಟ್ಟರೆ ಸಾಕು. ಪ್ರತಿ ದಿನ ಎರಡು ಅಥವಾ ಮೂರು ಸಲ ಕರುವಿಗೆ ಸ್ವಚ್ಚವಾದ ನೀರನ್ನು ಕುಡಿಸಬೇಕು. ಹೀಗೆ ಮಾಡಿದಲ್ಲಿ ಕರುವಿನ ಬೆಳವಣಿಗೆ ಚೆನ್ನಾಗಿ ಆಗಿ ಅವು ಬೇಗನೆ ಬೆದೆಗೆ ಬರುವವು.

೨. ಆಧುನಿಕ ಪದ್ಧತಿ

  • ಈ ಪದ್ಧತಿಯಲ್ಲಿ ತಾಯಿಯಿಂದ ಕರುವನ್ನು ಹುಟ್ಟಿದ ಕೂಡಲೇ ಬೇರ್ಪಡಿಸಲಾಗುತ್ತದೆ. ಈ ಪದ್ಧತಿಯಲ್ಲಿ ಪ್ರಯೋಜನಗಳು ಈ ರೀತಿ ಇವೆ.
  • ಕರುವಿನ ದೇಹದ ಬೆಳವಣಿಗೆಗೆ ಅನುಸಾರವಾಗಿ ಹಾಲನ್ನು ಕುಡಿಸಬಹುದು.
  • ಆಕಸ್ಮಿಕವಾಗಿ ಕರು ಸತ್ತರೂ ತಾಯಿ ಹಾಲಿನ ತೊರೆ ಬಿಡುವುದರಲ್ಲಿ ಯಾವ ತೊಂದರೆ ಇರುವುದಿಲ್ಲ ಅಥವಾ ತಾಯಿ ಸತ್ತರೂ ಕರುವಿಗೆ ತೊಂದರೆಯಾಗುವುದಿಲ್ಲ.
  • ತಾಯಿಯ ಹಾಲಿನ ಉತ್ಪತ್ತಿಯ ನಿರ್ದಿಷ್ಟ ಪ್ರಮಾಣವನ್ನು ಅಳೆಯಬಹುದು.
  • ಬೇಡವಾದ ಕರುಗಳನ್ನು ಯಾವದೇ ಸಮಯದಲ್ಲಿ ಮಾರಬಹುದು.

ಈ ಪದ್ಧತಿಯನ್ನು ಮಿಶ್ರತಳಿ ಹಸುಗಳಲ್ಲಿ ಮೊದಲನೆ ಸೂಲದಿಂದ ಅಳವಡಿಸುವುದು ಹೆಚ್ಚು ಸೂಕ್ತ.


Reference  - Package of Practices, UAS Dharwad