ಒಂದು ಸ್ವಚ್ಛವಾದ ಅಗಲ ಬಾಯಿಯ ಬುಟ್ಟಿಯಲ್ಲಿ ನಿರ್ದಿಷ್ಟ ಪ್ರಮಾಣದ ಹಾಲನ್ನು ಹಾಕಿ ಕರುವಿನ ಮುಂದೆ ಇಡಬೇಕು. ಸ್ವಚ್ಛವಾಗಿ ತೊಳೆದ ತೋರ ಬೆರಳು ಮತ್ತು ನಡುವಿನ ಬೆರಳನ್ನು ಹಾಲಿನಲ್ಲಿ ಅದ್ದಿ ಕರುವಿಗೆ ಚೀಪಿಸಬೇಕು. ಮೆಲ್ಲಗೆ ಅದರ ಬಾಯಿಯನ್ನು ಹಾಲಿದ್ದ ಬುಟ್ಟಿಯ ಹತ್ತಿರ ಚೀಪಿಸುತ್ತಾ ತಂದು ಹಾಲಿನ ಬುಟ್ಟಿಯಲ್ಲಿ ಮುಳುಗಿಸಬೇಕು. ಹೀಗೆ ಚೀಪಿಸುತ್ತಿರುವಾಗ ಹಾಲು, ಬೆರಳುಗಳ ಸಂದಿಯ ಮುಖಾಂತರ ಕರುವಿನ ಬಾಯಿಯಲ್ಲಿ ಪ್ರವೇಶಿಸುತ್ತದೆ. ಒಂದು ವಾರದಲ್ಲಿ ಕರು ಕ್ರಮೇಣವಾಗಿ ತನ್ನಷ್ಟಕ್ಕೆ ತಾನೇ ಹಾಲು ಕುಡಿಯಲು ಪ್ರಾರಂಭಿಸುತ್ತದೆ.
Reference - Package of Practices, UAS Dharwad
.png)
0 Comments