ಜಾನುವಾರುಗಳಿಗೆ ಕೋಡು ತನ್ನ ಆತ್ಮ ಸಂರಕ್ಷಣೆಗಾಗಿ ನಿಸರ್ಗ ಕೊಟ್ಟ ಕೊಡುಗೆ. ಆದರೆ ಸಾಕಿದ ದನಗಳಿಗೆ ಕೋಡುಗಳ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಮತ್ತು ಬೇರೆ ಹಲವಾರು ಕಾರಣಗಳಿಂದ ಹೆಣ್ಣು ಕರುಗಳಿಗೆ ಹುಟ್ಟಿದ ಒಂದು ತಿಂಗಳೊಳಗಾಗಿ ಪಶುವೈದ್ಯರಿಂದ ಕೋಡಿನ ಗಡ್ಡೆಯನ್ನು ಸುಡಿಸಬೇಕು.
ಕೋಡು ತೆಗೆಸುವುದರ ಉಪಯೋಗಗಳು
- ಕಡಿಮೆ ಸ್ಥಳದಲ್ಲಿ ಕೋಡಿಲ್ಲದ ಹೆಚ್ಚು ದನಗಳನ್ನು ಕಟ್ಟಬಹುದು.
- ದನಗಳು ಕಾದಾಡಿ ಕೋಡಿನಿಂದ ಆಗುವ ಗಾಯವನ್ನು ತಪ್ಪಿಸಬಹುದು.
- ಜನರಿಗೆ ಆಗಬಹುದಾದ ಅಪಾಯ ತಪ್ಪಿಸಬಹುದು
- ಕೋಡಿಗೆ ಬರುವಂತಹ ಕ್ಯಾನ್ಸರ ರೋಗವನ್ನು ತಪ್ಪಿಸಬಹುದು.
- ಕೋಡಿನ ಬೆಳವಣಿಗೆಗೆ ಬೇಕಾದ ಆಹಾರಾಂಶಗಳು ದೇಹದ ಬೆಳವಣಿಗೆಗೆ ಉಪಯೋಗವಾಗುವವು.
Reference - Package of Practices, UAS Dharwad
.png)
0 Comments