ಗಿಣ್ಣದ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಸಾಮಾನ್ಯ ಹಾಲಿಗೆ ಹೋಲಿಸಿದರೆ ಗಿಣ್ಣದ ಹಾಲಿನಲ್ಲಿ ಸಸಾರಜನಕ ೫ ಪಟ್ಟು, ಜೀವಸತ್ವ ಮತ್ತು ಲವಣಾಂಶಗಳು ೨ ಪಟ್ಟು ಹೆಚ್ಚು ಇರುತ್ತವೆ. ಸಕ್ಕರೆ ಅಂಶ ಅರ್ಧದಷ್ಟು ಕಡಿಮೆ ಇರುವದರಿಂದ ಕರುವಿಗೆ ಬೇಧಿಯಾಗುವದಿಲ್ಲ. ಗಿಣ್ಣದ ಹಾಲು ಸೌಮ್ಯ ಜುಲಾಬಿನಂತಿರುವದರಿಂದ ಕರುಳಿನಲ್ಲಿರುವ ಮೊದಲನೆ ಮಲವನ್ನು ಹೊರಹಾಕಲು ಸಹಕಾರಿಯಾಗಿದೆ. ನೈಸರ್ಗಿಕ ಕೊಡುಗೆಯಾದ ಗಿಣ್ಣದ ಹಾಲನ್ನು ಕರುವಿಗೋಸ್ಕರವೇ ಮೀಸಲಾಗಿಡಬೇಕು. ಸುಮಾರು ೫ ದಿನಗಳವರೆಗೆ ಸಾಕಷ್ಟು ಗಿಣ್ಣದ ಹಾಲನ್ನು ಪ್ರತಿದಿನ ಎರಡು ಸಲ ಕರುಗಳಿಗೆ ಕುಡಿಸಬೇಕು.
Reference - Package of Practices, UAS Dharwad
.png)
0 Comments