ಎಮ್ಮೆಗಳಲ್ಲಿ ಬೆದೆಯ ಅವಧಿ ಹೆಚ್ಚು ಆಗಿರುವುದರಿಂದ ಬೆದೆಯ ಲಕ್ಷಣಗಳು ಕಂಡು ಬಂದ ೧೪ ರಿಂದ ೨೦ ಗಂಟೆಯ ಅವಧಿಯಲ್ಲಿ ಗರ್ಭಧಾರಣೆ ಮಾಡಿಸಬೇಕು. ದಿನಕ್ಕೆ ಎರಡು ಸಲ ಕೋಣ ಹಾರಿಸುವುದು/ ಕೃತಕ ಗರ್ಭಧಾರಣೆ ಮಾಡಿಸುವುದರಿಂದ ಗರ್ಭ ಧರಿಸುವದನ್ನು ಹೆಚ್ಚಿಸಬಹುದು. ಹಿಂದಿನ ರಾತ್ರಿ ಬೆದೆಗೆ ಬಂದ ಎಮ್ಮೆಗಳನ್ನು ಮರುದಿನ ಮುಂಜಾನೆ ಮತ್ತು ಸಾಯಂಕಾಲದ ವೇಳೆಯಲ್ಲಿ ಹಾಗೂ ಹಗಲು ಅವಧಿಯಲ್ಲಿ ಬೆದೆಗೆ ಬಂದ ಎಮ್ಮೆಗಳಿಗೆ ಅದೇ ದಿನ ಸಾಯಂಕಾಲ ಮತ್ತು ಮರುದಿನ ಮುಂಜಾನೆ ಕೋಣ ಬಿಡಬೇಕು / ಕೃತಕ ಗರ್ಭಧಾರಣೆ ಮಾಡಿಸಬೇಕು.
Reference - Package of Practices, UAS Dharwad
.png)
0 Comments