Ad Code

ಕನ್ನಡ ವ್ಯಾಕರಣ: ಪ್ರಮುಖ ಅಂಶಗಳು


  • ಕನ್ನಡ ಭಾಷೆಯ ಈ ಭಾಷಾವರ್ಗಕ್ಕೆ ಸೇರಿದೆ - ದ್ರಾವಿಡ ಭಾಷಾವರ್ಗ.
  • ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಐದು ಭಾಷೆಗಳು - ಕನ್ನಡ, ತೆಲುಗು, ತಮಿಳು, ಮಲಯಾಳಿ ಮತ್ತು ತುಳು.
  • ಕನ್ನಡ ಭಾಷೆ ಬಳಕೆಯಲ್ಲಿರುವುದು - ಸುಮಾರು ಎರಡು ಸಾವಿರ ವರ್ಷಗಳಿಂದ.
  • ಪ್ರಾಚೀನ ಕಾಲದ ಕನ್ನಡ ಭಾಷೆಯನ್ನು ಹೀಗೆಂದು ಕರೆಯಲಾಗುತ್ತದೆ - ಹಳಗನ್ನಡ.
  • ಕ್ರಿ.ಶ.ಸುಮಾರು 1145ರಲ್ಲಿದ್ದ ಎರಡನೇ ನಾಗವರ್ಮನು ಬರೆದ ಎರಡು ಗ್ರಂಥಗಳು - ಕರ್ನಾಟಕ ಭಾಷಾಭೂಷಣ ಮತ್ತು ಕಾವ್ಯಾವಲೋಕನ.
  • ಎರಡನೇ ನಾಗವರ್ಮನ ಕಾವ್ಯಾವಲೋಕನ ಕೃತಿಯ ಈ ಹೆಸರಿನ ಒಂದನೇ ಭಾಗವು ವ್ಯಾಕರಣಶಾಸ್ತ್ರಕ್ಕೆ ಸಂಬಂಧಿಸಿದೆ - ಶಬ್ದಸ್ಮೃತಿ.
  • ಶಬ್ದಸ್ಮೃತಿಯಲ್ಲಿರುವ ಐದು ಭಾಗಗಳು - ಸಂಧಿ, ನಾಮ, ಸಮಾಸ, ತದ್ಧಿತ ಮತ್ತು ಆಖ್ಯಾತ.
  • ಕನ್ನಡ ವ್ಯಾಕರಣ ಗ್ರಂಥವಾದ 'ಕರ್ನಾಟಕ ಭಾಷಾ ಭೂಷಣ'ವು ಈ ಭಾಷೆಯಲ್ಲಿ ಬರೆಯಲ್ಪಟ್ಟಿದೆ - ಸಂಸ್ಕೃತ ಭಾಷೆ.
  • ಕ್ರಿ.ಶ.ಸುಮಾರು 1260ರಲ್ಲಿದ್ದ ಕೇಶಿರಾಜನು ರಚಿಸಿದ ಕನ್ನಡ ವ್ಯಾಕರಣಗ್ರಂಥದ ಹೆಸರು - ಶಬ್ದಮಣಿ ದರ್ಪಣ.
  • ಕೇಶಿರಾಜನ ತಂದೆಯ ಹೆಸರು - ಮಲ್ಲಿಕಾರ್ಜುನ ಕವಿ.
  • ಕವಿ ಜನ್ನು ಈತನಿಗೆ ಸೋದರಮಾವ - ಕೇಶಿರಾಜ.
  • ಶಬ್ದಮಣಿದರ್ಪಣ ವ್ಯಾಕರಣ ಗ್ರಂಥದಲ್ಲಿರುವ ಎಂಟು ಅಧ್ಯಾಯಗಳು ಇವು - ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ ಮತ್ತು ಅವ್ಯಯ.
  • ಶಬ್ದಮಣಿದರ್ಪಣ ಗ್ರಂಥದ ಕೊನೆಯಲ್ಲಿರುವ ಈ ಅಧ್ಯಾಯವು ಶಬ್ದಾರ್ಥನಿರ್ಣಯವನ್ನು ತಿಳಿಯಲು ಉಪಯುಕ್ತವಾಗಿದೆ - ಪ್ರಯೋಗಸಾರ.
  • ಶಬ್ದಮಣಿದರ್ಪಣ ವ್ಯಾಕರಣಗ್ರಂಥದ ಎಲ್ಲಾ ವ್ಯಾಕರಣ ಸೂತ್ರಗಳು ಈ ಸಾಹಿತ್ಯ ಪ್ರಕಾರದಲ್ಲಿವೆ - ಕಂದಪದ್ಯ.
  • ಶಬ್ದಮಣಿದರ್ಪಣ ವ್ಯಾಕರಣಗ್ರಂಥದಲ್ಲಿರುವ ಒಟ್ಟು ಸೂತ್ರಗಳ ಸಂಖ್ಯೆ - 322.
  • ಕ್ರಿ.ಶ.ಸುಮಾರು 1604ರಲ್ಲಿದ್ದ ಭಟ್ಟಾಕಳಂಕದೇವನು ರಚಿಸಿದ ಕನ್ನಡ ವ್ಯಾಕರಣಗ್ರಂಥ - ಶಬ್ದಾನುಶಾಸನ.
  • ಕನ್ನಡ ವ್ಯಾಕರಣಗ್ರಂಥ ಶಬ್ದಾನುಶಾಸನ ಈ ಭಾಷೆಯಲ್ಲಿದೆ - ಸಂಸ್ಕೃತ ಭಾಷೆ.
  • ಭಟ್ಟಾಕಳಂಕದೇವನ ಗುರುಗಳಾಗಿದ್ದವರು - ಅಕಳಂಕದೇವ.
  • ಅಷ್ಟಾಧ್ಯಾಯಿ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು - ಪಾಣಿನಿ.
  • ಮಹಾಭಾಷ್ಯ ಎಂಬ ವ್ಯಾಕರಣ ಗ್ರಂಥವನ್ನು ಬರೆದವರು - ಪತಂಜಲಿ ಮಹರ್ಷಿ.

Post a Comment

0 Comments

Close Menu