ಈ ಜಿಲ್ಲೆಯಲ್ಲಿ ತಾಳಿಕೋಟೆ ಅಥವಾ ರಕ್ಕಸ ತಂಗಡಗಿ ಎಂಬ ಯುದ್ಧ ನಡೆದ ಭೂಮಿ ಇದೆ. ಈ ಕದನವು 1565 ಜನವರಿ 23 ರಂದು ನಡೆಯಿತು. ಈ ಕದನವು ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ನಡೆಯಿತು. ಇದರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು. ಈ ಕದನ ನಡೆಯುತ್ತಿದ್ದಾಗ ವಿಜಯನಗರ ಸಾಮ್ರಾಜ್ಯದ ಅರಸ ಸದಾಶಿವರಾಯ ಇದ್ದನು.
ಈ ಯುದ್ಧದ ನಾಯಕತ್ವವನ್ನು ಅಳಿಯರಾಮರಾಯ ವಹಿಸಿಕೊಂಡಿದ್ದನು.
ಭಾರತದ ಅತೀ ದೊಡ್ಡ ಗುಮ್ಮಟವಾದ ಗೋಲಗುಮ್ಮಟವು ಬಿಜಾಪುರದಲ್ಲಿದೆ. ಈ ಕಟ್ಟಡವನ್ನು ಮಹಮ್ಮದ್ ಆದಿಲ್ ಶಾ ಕಟ್ಟಿಸಿದನು. ಇಲ್ಲಿ ಮಹಮ್ಮದ್ ಆದಿಲ್ ಶಾನ ಸಮಾಧಿಯಾಗಿದೆ.
ಬಿಜಾಪುರದಲ್ಲಿರುವ ಇಬ್ರಾಹಿಂ ರೋಜಾವನ್ನು ದಕ್ಷಿಣ ಭಾರತದ ತಾಜ್ ಮಹಲ್ ಎಂದು ಕರೆಯಲಾಗುತ್ತದೆ. ಇದನ್ನು 2ನೇ ಇಬ್ರಾಹಿಂ ಆದಿಲ್ ಶಾ ಕಟ್ಟಿಸಿದನು.
ಬಸವನ ಬಾಗೇವಾಡಿ ಬಸವಣ್ಣನ ಜನ್ಮಸ್ಥಳವಾಗಿದೆ.
ಇದನ್ನು ಕರ್ನಾಟಕದ ಪಂಜಾಬ್ ಎಂದು ಕರೆಯುತ್ತಾರೆ.
ಇಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ.
ಇಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು 2003ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಅಕ್ಕಮಹಾದೇವಿ ಮಹಿಳಾವಿಶ್ವವಿದ್ಯಾಲಯ ಎಂದು 2017 ರಲ್ಲಿ ನಾಮಕರಣ ಮಾಡಲಾಗಿದೆ.
ಆಲಮಟ್ಟಿ ಜಲಾಶಯ ಅಥವಾ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯವನ್ನು ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.
ನವರಸಪುರ ಉತ್ಸವ ನಡೆಯುತ್ತದೆ. ನವರಸಪುರ ಉತ್ಸವವು ಸಂಗೀತಕ್ಕೆ ಸಂಬಂಧಿಸಿದೆ.
ಕೃಷ್ಣಾ, ದೋಣಿ ಮತ್ತು ಭೀಮಾ ನದಿಗಳು ಹರಿಯುತ್ತವೆ.
ಅಸರ್‌ಮಹಲ್, ಗಗನ್‌ಮಹಲ್, ಗೋಲಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ್ ಎಂಬ ಕಟ್ಟಡಗಳಿವೆ.
1956 ಕ್ಕಿಂತ ಮುಂಚೆ ಮುಂಬೈ ಪ್ರಾಂತ್ಯದಲ್ಲಿತ್ತು.
ಇಂಡಿ ತಾಲ್ಲೂಕಿನ ಸಾಲೋಟಗಿ ರಾಷ್ಟ್ರಕೂಟರ ಶಿಕ್ಷಣ ಕೇಂದ್ರವಾಗಿತ್ತು.
ಕರ್ನಾಟಕದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಯಾಗಿದೆ.
0 Comments