ಧಾರವಾಡಿ ಎಮ್ಮೆಗಳು


ಧಾರವಾಡಿ ಎಮ್ಮೆಯು ಉತ್ತರ ಕರ್ನಾಟಕದ ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕಾಣಸಿಗುತ್ತವೆ. ಧಾರವಾಡಿ ಎಮ್ಮೆಗಳಿಗೆ ಮುಂಡರಗಿ ಎಮ್ಮೆ, ಹೊಳೆಸಾಲ ಎಮ್ಮೆ ಹಾಗೂ ಬದಾಮಿ ಎಮ್ಮೆಗಳೆಂದೂ ಸಹ ಕರೆಯುತ್ತಾರೆ. ಇವು ಮಧ್ಯಮ ಗಾತ್ರ ಹೊಂದಿದ್ದು, ಸುಮಾರು ೩೪೦ ಕಿ.ಗ್ರಾಂ ದೇಹದ ತೂಕ ಹೊಂದಿರುತ್ತವೆ. ಈ ಎಮ್ಮೆಯು ಕಪ್ಪು ಬಣ್ಣದ್ದಾಗಿದ್ದು, ಕೋಡು ಮಧ್ಯಮ ಉದ್ದವನ್ನು ಹೊಂದಿರುತ್ತವೆ. ಇದರ ಕೋಡು ಅರ್ಧ ಚಂದ್ರಾಕೃತಿಯನ್ನು ಹೊಂದಿದ್ದು ಎರಡೂ ಕೋಡುಗಳು ಇಣಿಯ ಹತ್ತಿರ ಒಂದನ್ನೊಂದು ಮುಟ್ಟುವಂತಿರುತ್ತವೆ. ಒಂದು ಸೂಲದಲ್ಲಿ ಸುಮಾರು ೯೭೦ ಲೀಟರ್ ಹಾಲು ಕೊಡಬಲ್ಲವು. ಹಾಲಿನಲ್ಲಿ ಸರಾಸರಿ ೭% ಕೊಬ್ಬು ಹಾಗೂ ೯.೩% ಕೊಬ್ಬು ರಹಿತ ಘನ ಪದಾರ್ಥಗಳಿರುತ್ತವೆ. ಹಾಲು ಕೊಡುವ ಅವಧಿ ೩೩೦ ದಿನಗಳದ್ದಿರುತ್ತದೆ. ಈ ಎಮ್ಮೆಗಳು ಸರಾಸರಿ ೫೦ ತಿಂಗಳ ವಯಸ್ಸಿನಲ್ಲಿ ಮೊದಲ ಕರು ಹಾಕುತ್ತವೆ. ಕರಾವಿನ ಅಂತರ ಸುಮಾರು ೧೭ ತಿಂಗಳದ್ದಾಗಿರುತ್ತದೆ. ಈ ಎಮ್ಮೆಗಳನ್ನು ರೈತರು ಕೋಣಗಳ ಆಯ್ಕೆ ಹಾಗೂ ಉತ್ತಮ ಪಾಲನೆ ಮಾಡುವುದರಿಂದ ಈ ತಳಿಯ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು.


Reference  - Package of Practices, UAS Dharwad