ಹೆಚ್ಚಿನ ಪ್ರಮಾಣದಲ್ಲಿ ಕರುಗಳು ಜಂತು ಭಾದೆಯಿಂದ ಸಾಯುವ ಸಂಭವವಿರುತ್ತದೆ. ಈ ಬಾಧೆಯ ನಿವಾರಣೆಗೆ ಪಶು ವೈದ್ಯರ ಸಲಹೆ ಪಡೆದು, ಸೂಕ್ತವಾದ ಜಂತು ನಿವಾರಕ ಔಷಧಿಯನ್ನು ಕರು ಹುಟ್ಟಿದ ೭ ನೆಯ ದಿನ, ೧ ನೆಯ ತಿಂಗಳು, ೨ ನೆಯ ತಿಂಗಳು, ೩ ನೆಯ ತಿಂಗಳು, ೬ ನೆಯ ತಿಂಗಳು ಹಾಗೂ ಪ್ರತಿ ವರ್ಷಕ್ಕೊಮ್ಮೆ ಹಾಕಿಸಬೇಕು.
ಸಾಮಾನ್ಯವಾಗಿ ರೈತರು ಹೋರಿ ಕರು ಮತ್ತು ಕೋಣ ಕರುಗಳಿಗೆ ಹೆಚ್ಚಿನ ಆದ್ಯತೆ ಕೊಡುವದಿಲ್ಲ. ಆದುದರಿಂದ ಇವುಗಳ ಸಾವಿನ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ಗಂಡು ಕರುಗಳಿಗೂ ಕೂಡ ಇತರ ಕರುಗಳ ಹಾಗೆ ಜಂತುನಿವಾರಣೆಯನ್ನು ಸರಿಯಾದ ಸಮಯಕ್ಕೆ ಕೈಗೊಂಡರೆ ಉತ್ತಮವಾದ ಹೋರಿ ಆಥವಾ ಕೋಣವನ್ನು ಪಡೆಯಬಹುದು.
Reference - Package of Practices, UAS Dharwad
.png)
0 Comments