| ಗಿರ್ |
ಕಾಠಿಯಾವಾಡಿ, ಸುರ್ತಿ, ಡೆಕನ್ ಇವು ಸಹ ಗಿರ್ ತಳಿ ಆಕಳುಗಳ ಬೇರೆ ಬೇರೆ ಹೆಸರುಗಳು. ಗುಜರಾತದ ಗಿರ್ ಪರ್ವತಾವಳಿ, ಜುನಾಗಡ್, ದಕ್ಷಿಣ ಕಾಠಿಯಾವಾಡ ಈ ತಳಿಯ ಉಗಮಸ್ಥಾನ. ಈ ತಳಿಯು ಸೌಮ್ಯ ಸ್ವಭಾವದ್ದಾಗಿದೆ, ಕಿವಿಗಳು ತೀರಾ ಉದ್ದವಾಗಿದ್ದು, ಜೋತಾಡುತ್ತಿರುತ್ತವೆ. ಮುಖದಲ್ಲಿ ಹಣೆ ದಪ್ಪಗಿದ್ದು, ಹೊರಚಾಚಿರುತ್ತದೆ. ನುಣುಪಾದ ಚರ್ಮ ಹೊಂದಿದ್ದು, ಕೆಂಪು ಬಣ್ಣದಿಂದ ಕಪ್ಪುಬಣ್ಣದವರೆಗೆ ಬೇರೆ ಬೇರೆ ವರ್ಣ ಹೊಂದಿರುತ್ತವೆ. ಈ ತಳಿಯ ವೈಶಿಷ್ಟ್ಯವೆಂದರೆ ವಿವಿಧ ಬಣ್ಣಗಳ ಚುಕ್ಕೆಗಳು ಮೈ ತುಂಬ ಇರುತ್ತವೆ. ಆಕಳುಗಳ ಸರಾಸರಿ ತೂಕ ೩೯೦ ಕಿ.ಗ್ರಾಂ ಇದ್ದರೆ ಹೋರಿಗಳು ೫೫೦ ಕಿ. ಗ್ರಾಂ ತೂಗುತ್ತವೆ. ಒಂದು ಸೂಲಿನ ಸರಾಸರಿ ಹಾಲಿನ ಉತ್ಪನ್ನ ೧೭೫೦ ಕಿ. ಗ್ರಾಂ ಇರುವುದು. ಎತ್ತುಗಳು ಶಕ್ತಿಯುತವಾಗಿದ್ದು, ಮಧ್ಯಮ ವೇಗ ಹೊಂದಿರುತ್ತವೆ. ಹೊಲದ ಕೆಲಸಕ್ಕೆ ಉಪಯುಕ್ತವಾಗಿವೆ. ಇವು ಗುಜರಾತ, ಮುಂಬೈ, ಪುಣೆ ಮತ್ತಿತರ ಕಡೆ ಇವು ಸಿಗುತ್ತವೆ.
Reference - Package of Practices, UAS Dharwad
0 Comments