ಈ ತಳಿಯ ಮೂಲಸ್ಥಾನ ಮಹಾರಾಷ್ಟ್ರದ ದಕ್ಷಿಣ ಭಾಗ ಮತ್ತು ಉತ್ತರ ಕರ್ನಾಟಕ. ಈ ತಳಿಯು ಕಡಿಮೆ ಮಟ್ಟದ ಮೇವಿಗೂ ಹೊಂದಿಕೊಳ್ಳುತ್ತದೆ. ಕೋಡುಗಳು ಉದ್ದವಾಗಿದ್ದು, ಹಿಂಭಾಗಕ್ಕೆ ಬೆಳೆದು ನಂತರ ಮೇಲ್ಮುಖವಾಗಿ ತಿರುಗಿ ಬಿಲ್ಲಿನಾಕಾರದಲ್ಲಿರುತ್ತವೆ. ಈ ತಳಿಯ ಎಮ್ಮೆಗಳು ಒಂದು ಸೂಲಿನಲ್ಲಿ ಸರಾಸರಿ ೧೦೦೦-೧೨೦೦ ಲೀಟರ್ ಹಾಲನ್ನು ಕೊಡುತ್ತದೆ ಹಾಗೂ ಹಾಲಿನಲ್ಲಿ ಶೇ. ೭.೦-೭೫ ರಷ್ಟು ಜಿಡ್ಡಿನಾಂಶವಿರುತ್ತದೆ.
Reference - Package of Practices, UAS Dharwad

0 Comments