ಈ ತಳಿಗೆ ಲೋಲಾ, ಮೊಂಟಗೋಮೆರಿ ಮತ್ತು ಮುಲ್ತಾನಿ ಎಂದೂ ಕರೆಯುತ್ತಾರೆ. ಈ ತಳಿಯು ಪಂಜಾಬಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಕೆಂಪು, ನಸುಕೆಂಪು ಅಥವಾ ದಟ್ಟ ಕಂದು ಬಣ್ಣದ ಚರ್ಮವಿದ್ದು, ದೇಹದ ಮೇಲಿನ ಚರ್ಮ ಸಡಿಲವಾಗಿರುತ್ತದೆ. ದೇಹ ದೊಡ್ಡದು. ಕೋಡುಗಳು ಚಿಕ್ಕದಾಗಿದ್ದು, ದಪ್ಪವಾಗಿರುತ್ತವೆ. ಗಂಗೆದೊಗಲು ದೊಡ್ಡದಾಗಿದ್ದು, ಜೋತಾಡುತ್ತಿರುತ್ತದೆ. ಹೋರಿಗಳಲ್ಲಿ ಇಣಿ ದೊಡ್ಡದಾಗಿದ್ದು, ಗಂಗೆದೊಗಲು ದಪ್ಪವಾಗಿರುತ್ತದೆ. ಹೋರಿಯ ತೂಕ ೫೦೦ ಕಿ. ಗ್ರಾಂ ಗಳವರೆಗೆ ಇದ್ದರೆ, ಆಕಳ ತೂಕ ೩೫೦ ಕಿ. ಗ್ರಾಂ ವರೆಗೆ ಇರುವುದು. ಈ ಆಕಳುಗಳು ಒಂದು ಸೂಲದಲ್ಲಿ ಸರಾಸರಿ ೨೧೫೦ ಕಿ. ಗ್ರಾಂ ಹಾಲು ಕೊಡಬಲ್ಲವು. ಸುಧಾರಿತ ಡೇರಿಗಳಲ್ಲಿ ಒಂದು ಸೂಲದಲ್ಲಿ ೪೦೦೦ ಕಿ. ಗ್ರಾಂ ಹಾಲು ಉತ್ಪಾದನೆಯ ದಾಖಲೆಗಳೂ ಉಂಟು. ಸಹಿವಾಲ್ ತಳಿ ನಮ್ಮ ದೇಶದ ಶ್ರೇಷ್ಠ ಹೈನು ತಳಿಯಾಗಿದೆ.
Reference - Package of Practices, UAS Dharwad
0 Comments