ಕರು ಹಾಕಿದ ನಂತರ ಬೆದೆಯ ಚಕ್ರದಲ್ಲಿ ಬೆದೆಯ ಪುನರಾರಂಭ ಕಂಡು ಹಿಡಿಯುವುದು ಪ್ರಮುಖ ಸಮಸ್ಯೆಯಾಗಿದೆ. ಕೆಲವು ಸಮಯಗಳಲ್ಲಿ ದನಗಳು ಮೂಕ ಬೆದೆಯನ್ನು ತೋರಿಸಬಹುದು. ಇಂತಹ ಬೆದೆಯನ್ನು ಗುರುತಿಸಲು ಅವುಗಳ ಹಿಂಬೆನ್ನಿನ ಮೇಲೆ ಎರಡು ಕೈಗಳಿಂದ ಅದುಮಿದರೆ ಅವು ಸುಮ್ಮನೆ ನಿಂತುಕೊಳ್ಳುತ್ತವೆ ಮತ್ತು ಬಾಲವನ್ನು ಎತ್ತಿ ಒಂದು ಕಡೆ ಹಿಡಿಯುತ್ತವೆ. ಆರೋಗ್ಯವಾಗಿರುವಂತಹ ಎಮ್ಮೆಗಳು ೨೧ ದಿವಸಗಳಿಗೆ ಒಮ್ಮೆ ಬೆದೆಗೆ ಬರುತ್ತಿರುತ್ತವೆ. ಈ ಬೆದೆಯು ಗರ್ಭ ಧರಿಸಿದ ನಂತರ ಅಥವಾ ಗರ್ಭಕೋಶಕ್ಕೆ ರೋಗ ತಗುಲಿದ್ದರೆ ಕಾಣಿಸಿಕೊಳ್ಳುವುದಿಲ್ಲ. ಎಮ್ಮೆಗಳಿಗೆ ಕರು ಹಾಕಿದ ೩ ತಿಂಗಳ ನಂತರ ಬರುವ ಬೆದೆಯಲ್ಲಿ ಕೃತಕ ಗರ್ಭಧಾರಣೆ ಮಾಡಿಸಬೇಕು ಅಥವಾ ಕೋಣವನ್ನು ಹಾರಿಸಬೇಕು. ಕರುವನ್ನು ಬೇಗನೆ ಬೇರ್ಪಡಿಸುವುದು ಮತ್ತು ಪೌಷ್ಠಿಕ ಆಹಾರ ಒದಗಿಸುವುದು ಬೆದೆಯ ಚಕ್ರ ಪುನರಾರಂಭಿಸಲು ಸಹಾಯಕಾರಿಯಾಗುತ್ತದೆ. ಇದರ ಔಷಧೋಪಚಾರದ ನಿರ್ವಹಣೆಗಾಗಿ ರೈತರು ಹತ್ತಿರದ ಪಶುವೈದ್ಯರನ್ನು ಕಾಣಬೇಕು.


Reference  - Package of Practices, UAS Dharwad